Tuesday, Nov 19 2019 | Time 05:38 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
National Share

ರೈಲ್ವೆ ಖಾಸಗೀಕರಣಗೊಂಡರೆ 'ದಯಾಮರಣಕ್ಕೆ ಕಾಯಬೇಕಾಗುತ್ತದೆ: ಕೇರಳ ಸಂಸದ

ನವದೆಹಲಿ, ಜು 12 (ಯುಎನ್ಐ) ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಏರ್ ಇಂಡಿಯಾ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಈಗ ಭಾರತೀಯ ರೈಲ್ವೆ ಕೂಡ ಖಾಸಗೀಕರಣಗೊಂಡರೆ ಅದು ತನ್ನ “ದಯಾ ಮರಣಕ್ಕಾಗಿ” ಕಾಯಬೇಕಾಗುತ್ತದೆ ಎಂದು ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್‌ನ ಕೇರಳ ಸಂಸದ ಪಿ.ಕೆ.ಕುಂಞಾಲಿಕುಟ್ಟಿ ಹೇಳಿದ್ದಾರೆ.
ನಾವು ಏರ್ ಇಂಡಿಯಾದಲ್ಲಿ ಪ್ರಯಾಣಿಸುವಾಗ ನಮ್ಮ ಏರ್ ಇಂಡಿಯಾ ಎಷ್ಟು ದಿನ ಇರಬಹುದು ಎಂದು ಯೋಚಿಸುತ್ತಿದ್ದೇವೆ. ರೈಲ್ವೆ ಕೂಡ ಖಾಸಗಿಕರಣಗೊಳ್ಳಲಿದೆ ಎಂಬ ಮಾತು ಈಗ ಸಾಮಾನ್ಯವಾಗಿದೆ. ಅದು ಖಾಸಗೀಕರಣಗೊಂಡರೆ, ಅದು ತನ್ನ ದಯಾ ಮರಣಕ್ಕಾಗಿ ಕಾಯಬೇಕಾಗುತ್ತದೆ ಎಂದು ಮಲಪ್ಪುರಂ ಲೋಕಸಭಾ ಕ್ಷೇತ್ರದ ಸಂಸದ, ಗುರುವಾರ ರೈಲ್ವೆ ಇಲಾಖೆಯ ಅನುದಾನ ಬೇಡಿಕೆಯ ಬಗ್ಗೆ ಲೋಕಸಭೆಯಲ್ಲಿ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಸರ್ಕಾರದ ಖಾಸಗೀಕರಣ ಮತ್ತು ಸಾಂಸ್ಥೀಕರಣ ನೀತಿಯ ಬಗ್ಗೆ ಕಾಂಗ್ರೆಸ್ ಸೇರಿದಂತೆ ಹಲವು ರಾಜಕೀಯ ಪಕ್ಷಗಳ ಸದಸ್ಯರು ಕಳವಳ ವ್ಯಕ್ತಪಡಿಸಿದರು.
ಕಳೆದ ಒಂದೆರಡು ವರ್ಷಗಳಲ್ಲಿ ಏರ್ ಇಂಡಿಯಾಗೆ ಏನಾಯಿತು ಎಂಬುದರ ಬಗ್ಗೆ ಚೆನ್ನಾಗಿ ತಿಳಿದುಕೊಳ್ಳಿ ಎಂದು ಅವರು ಹೇಳಿದರು.
ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ ಮಾತನಾಡಿ, ಪ್ರಧಾನಿ ಮೋದಿ ಅವರು ವಾರಾಣಸಿಯಲ್ಲಿ ರೈಲ್ವೆಯನ್ನು ಖಾಸಗೀಕರಣಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ 2019-20ನೆ ಸಾಲಿನ ಬಜೆಟ್‍ನಲ್ಲಿ ಖಾಸಗಿ-ಸಾರ್ವಜನಿಕ ಸಹಭಾಗಿತ್ವದ ನಿಯಮಗಳು, ಸಾಂಸ್ಥೀಕರಣ, ಹೂಡಿಕೆ ಹಿಂಪಡೆಯುವುದರ ಬಗ್ಗೆ ಪ್ರಸ್ತಾಪಿಸಿರುವುದನ್ನು ನೋಡಿದರೆ ಸರ್ಕಾರದ ನಡೆ ಸ್ಪಷ್ಟವಾಗುತ್ತಿದೆ ಎಂದು ಹೇಳಿದರು.
ಆದಾಗ್ಯೂ, ಬಿಜೆಪಿ ಸಂಸದ ಗೋಪಾಲ್ ಶೆಟ್ಟಿ ಪ್ರತಿಕ್ರಿಯಿಸಿ, ಪಿಪಿಪಿ ಮಾದರಿ ಏಕೈಕ ಪರಿಹಾರವಾಗಿದ್ದು, ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲಿದೆ ಎಂದು ಪ್ರತಿಪಾದಿಸಿದರು.
ಲೋಕಸಭೆಯಲ್ಲಿ ಗುರುವಾರ ಮಧ್ಯರಾತ್ರಿಯವರೆಗೆ ರೈಲ್ವೆ ಸಚಿವಾಲಯದ ಧನಸಹಾಯದ ಬೇಡಿಕೆ ಕುರಿತು ಚರ್ಚೆ ನಡೆಯಿತು. ಹೆಚ್ಚಿನ ಸದಸ್ಯರು ತಮ್ಮ ಸಂಸದೀಯ ಕ್ಷೇತ್ರಗಳಿಗೆ ಅನುದಾನದ ಬೇಡಿಕೆ ಇಟ್ಟಿದ್ದಾರೆ.
ತೃಣಮೂಲ ಕಾಂಗ್ರೆಸ್ ನಾಯಕ ಸುದೀಪ್ ಬಂಡೋಪಾಧ್ಯಾಯ ಮಾತನಾಡಿ, ಭಾರತೀಯ ರೈಲ್ವೆ ಖಾಸಗೀಕರಣದತ್ತ ಸಾಗುತ್ತಿದೆ ಎಂಬುದನ್ನು ಈ ಬಜೆಟ್ ಸೂಚಿಸುತ್ತಿದೆ ಎಂದು ಹೇಳಿದರು.
ಬಿಜೆಪಿ ಸಂಸದರಾದ ಸಂಗೀತಾ ಕುಮಾರಿ ಸಿಂಗ್ ದಿಯೋ ಮಾತನಾಡಿ, ನರೇಂದ್ರ ಮೋದಿ ಅವಧಿಯಲ್ಲಿ, ಕೇಂದ್ರ ಸರ್ಕಾರ ನಮ್ಮ ನಾಗರಿಕರ ಸಾಮಾಜಿಕ-ಆರ್ಥಿಕ ಯೋಗಕ್ಷೇಮವನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಮೂಲಕ ಸರ್ಕಾರವು ಕಲ್ಯಾಣ ರಾಜ್ಯವಾಗಿ ತನ್ನ ಜವಾಬ್ದಾರಿಗಳನ್ನು ಪೂರೈಸಲು ಪ್ರಾರಂಭಿಸಿದೆ, ರೈಲ್ವೆ ಬಜೆಟ್ ಸಂಪೂರ್ಣವಾಗಿ ನವ ಭಾರತದ ದೃಷ್ಟಿಕೋನವನ್ನು ಹೊಂದಿದೆ ಎಂದರು.
ಶುಕ್ರವಾರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಚರ್ಚೆಗೆ ಉತ್ತರ ನೀಡುವ ನಿರೀಕ್ಷೆ ಇದೆ.
ಯುಎನ್ಐ ಎಎಚ್ ಆರ್ ಕೆ 919