Monday, Jun 24 2019 | Time 15:07 Hrs(IST)
 • ವಿಧಾನಸೌಧದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಗ್ರಂಥಪಾಲಕ
 • ಮನ್ಸೂರ್ ಬಗ್ಗೆಯ ಮಾಹಿತಿ ಬಹಿರಂಗಪಡಿಸುವುದಿಲ್ಲ: ರವಿಕಾಂತೇಗೌಡ
 • ರಷ್ಯನ್‌ ಹೆಲಿಕಾಪ್ಟರ್ಸ್‌ ಕಂಪೆನಿಯಿಂದ ಪ್ರಸಕ್ತ ವರ್ಷ 200 ಹೆಲಿಕಾಪ್ಟರ್‌ಗಳ ಉತ್ಪಾದನೆ
 • ಮರಾಠವಾಡದಲ್ಲಿ ಮುಂದುವರಿದ ಮಳೆ, ರೈತರಲ್ಲಿ ಹರ್ಷ
 • ಲೋಕಸಭೆ; ರಾಷ್ಟ್ರಪತಿ ಭಾಷಣ ಮೇಲಿನ ವಂದನಾ ನಿರ್ಣಯ ಚರ್ಚೆ ಆರಂಭ; ಮೋದಿ ಸರ್ಕಾರ ಸಾಧನೆ ಕೊಂಡಾಡಿದ ಸಾರಂಗಿ
 • ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಶರಣಾದರೆ ಸೂಕ್ತ ರಕ್ಷಣೆ - ಜಮೀರ್ ಅಹಮದ್ ಖಾನ್
 • ಮಹತ್ವದ ಕುಡಿಯುವ ನೀರು ಅಭಾವ ವಿಷಯ ಕುರಿತು ಪ್ರತ್ಯೇಕ ಚರ್ಚೆ ಅಗತ್ಯ: ವೆಂಕಯ್ಯ ನಾಯ್ಡು
 • ಶಮಿ ಹ್ಯಾಟ್ರಿಕ್‌ ಸಾಧನೆಯೇ ನನ್ನ ಸ್ಮರಣೆಗೆ ಕಾರಣ: ಚೇತನ್‌ ಶರ್ಮಾ
 • 100 ದಶಲಕ್ಷ ಮಂದಿಯಿಂದ ಇಂಡೋ-ಪಾಕ್‌ ಪಂದ್ಯ ವೀಕ್ಷಣೆ
 • ನೀರಿನ ಬಿಕ್ಕಟ್ಟು: ಜೈಲುಭರೋ ಚಳುವಳಿ ಸ್ಟಾಲಿನ್ ಎಚ್ಚರಿಕೆ
 • ಬಿಎಸ್ ಪಿ- ಎಸ್ ಪಿ ಮೈತ್ರಿ ಮುರಿದುಕೊಂಡ ಮಾಯಾವತಿ
 • ನಾಳೆ ಇಂಗ್ಲೆಂಡ್‌-ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಕದನ
 • ಭಾರತೀಯ ವೈಮಾನಿಕ ಪ್ರದೇಶವನ್ನು ಪಾಕ್ ಎಂದಿಗೂ ಉಲ್ಲಂಘಿಸಿಲ್ಲ: ಏರ್ ಚೀಫ್‍ ಮಾರ್ಷಲ್‍ ಧನೋವಾ
 • ಬಾಂಗ್ಲಾದೇಶ: ರೈಲು ಹಳಿ ತಪ್ಪಿಏಳು ಸಾವು, 200 ಮಂದಿಗೆ ಗಾಯ
 • ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ
Sports Share

ಲಂಡನ್‌ಗೆ ತೆರಳುವಂತೆ ಪಂತ್‌ಗೆ ಬಿಸಿಸಿಐ ಕರೆ .!

ಲಂಡನ್, ಜೂ 12 (ಯುಎನ್‌ಐ) ಹೆಬ್ಬೆರಳು ಗಾಯದಿಂದ ಚೇತರಿಸಿಕೊಳ್ಳುತ್ತಿರುವ ಎಡಗೈ ಬ್ಯಾಟ್ಸ್‌ಮನ್ ಶಿಖರ್‌ ಧವನ್‌ ಅವರ ಬದಲು ಮುಂಜಾಗೃತ ಕ್ರಮವಾಗಿ ರಿಷಭ್‌ ಪಂತ್‌ ಅವರಿಗೆ ಲಂಡನ್‌ ಗೆ ತರಳುವಂತೆ ಬಿಸಿಸಿಐ ತಿಳಿಸಿದೆ.
ಸಾಧ್ಯವಾದಷ್ಟು ಬೇಗ ಲಂಡನ್ ವಿಮಾನ ಹತ್ತುವಂತೆ ವಿಕೆಟ್ ಕೀಪರ್, ಬ್ಯಾಟ್ಸ್‌ಮನ್‌ ರಿಷಭ್‌ ಪಂತ್‌ಗೆ ಬಿಸಿಸಿಐ ಕರೆ ನೀಡಿದೆ. ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಗಾಯಗೊಂಡಿರುವುದರಿಂದ ಭಾರತ ವಿಶ್ವಕಪ್‌ ತಂಡ ಸೇರಿಕೊಳ್ಳುವಂತೆ ಬಿಸಿಸಿಐಯು ಪಂತ್‌ಗೆ ತಿಳಿಸಿದೆ ಎಂದು ಮೂಲಗಳಿಂದ ಮಾಹಿತಿ ಲಭಿಸಿದೆ.
ಮಾಹಿತಿಯ ಪ್ರಕಾರ, ಶಿಖರ್ ಧವನ್ ಅವರನ್ನು ತಂಡದಲ್ಲೇ ಉಳಿಸಿಕೊಂಡು, ಅವರ ಆರೋಗ್ಯ ಸ್ಥಿತಿಗತಿಗಳ ಮೇಲೆ ಬಿಸಿಸಿಐ ನಿಗಾವಹಿಸುತ್ತಿರುವುದರಿಂದ ಪಂತ್ ಅವರನ್ನು ಭಾರತ ವಿಶ್ವಕಪ್‌ ತಂಡದಲ್ಲಿ ಅಧಿಕೃತವಾಗಿ ಘೋಷಿಸಲಾಗಿಲ್ಲ. ಆದರೆ ಮುಂಜಾಗೃತಾ ಕ್ರಮವಾಗಿ ಪಂತ್‌ ಅವರನ್ನು ಲಂಡನ್‌ಗೆ ಕರೆಸಿಕೊಳ್ಳಲಾಗುತ್ತಿದೆ.
ಇದಕ್ಕೂ ಮೊದಲು 15 ಜನರ ಭಾರತ ವಿಶ್ವಕಪ್ ತಂಡದಲ್ಲಿ ಯುವ ಸ್ಫೋಟಕ ಬ್ಯಾಟ್ಸ್‌ಮನ್‌ ಪಂತ್ ಅವರನ್ನು ಕಡೆಗಣಿಸಲಾಗಿತ್ತು. ಪಂತ್ ಬದಲಿಗೆ ಅನುಭವಿ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಅವರನ್ನು ಸ್ಟ್ಯಾಂಡ್‌ ಬೈ ಆಟಗಾರನಾಗಿ ಹೆಸರಿಸಲಾಗಿತ್ತು. ಆದರೆ, ಧವನ್ ಗಾಯದ ಬಳಿಕ ರಾಯುಡು ಬದಲಿಗೆ ದೆಹಲಿ ಬ್ಯಾಟ್ಸ್‌ಮನ್‌ಗೆ ಆದ್ಯತೆ ನೀಡಲಾಗಿದೆ.
ಎಡಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿರುವ ಧವನ್ ಅನುಪಸ್ಥಿತಿಯಲ್ಲಿ ಕೆ.ಎಲ್ ರಾಹುಲ್ ಆರಂಭಿಕರಾಗಿ ರೋಹಿತ್ ಶರ್ಮಾ ಅವರಿಗೆ ಸಾಥ್ ನೀಡುವುದನ್ನು ನಿರೀಕ್ಷಿಸಲಾಗಿದೆ. ದಿನೇಶ್ ಕಾರ್ತಿಕ್ ಅಥವಾ ವಿಜಯ್ ಶಂಕರ್ 4ನೇ ಕ್ರಮಾಂಕದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಭಾರತ ನಾಳೆ ನ್ಯೂಜಿಲೆಂಡ್‌ ವಿರುದ್ಧ ಸೆಣಸಲಿದ್ದು, ಮುಂದಿನ ಭಾನುವಾರ ಪಾಕಿಸ್ತಾನದ ವಿರುದ್ಧ ಕಾದಾಟ ನಡೆಸಲಿದೆ.
ಯುಎನ್‌ಐ ಆರ್‌ಕೆ ಎಎಚ್‌ 1432