Friday, Feb 28 2020 | Time 09:34 Hrs(IST)
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Health -Lifestyle Share

ವರ್ಷಾರಂಭದಲ್ಲೇ ರಾಜ್ಯದಲ್ಲಿ 40 ಎನ್ 1 ಎನ್ 1 ಸೋಂಕು ಪತ್ತೆ

ಬೆಂಗಳೂರು, ಜ 23 (ಯುಎನ್ಐ) ರಾಜ್ಯದಲ್ಲಿ 2020ರ ಜನವರಿಯಲ್ಲಿ 40 ಎಚ್‌1ಎನ್‌1 ಪ್ರಕರಣಗಳು ವರದಿಯಾಗಿವೆ.
ಇದರಲ್ಲಿ 24 ಪ್ರಕರಣಗಳು ಬೆಂಗಳೂರು ನಗರದಲ್ಲಿ ಬೆಳಕಿಗೆ ಬಂದಿವೆ. ಬಿಬಿಎಂಪಿ ವ್ಯಾಪ್ತಿಯ ಆಸ್ಪತ್ರೆಯಲ್ಲಿಯೇ 22 ಪ್ರಕರಣಗಳು ಬೆಳಕಿಗೆ ಬಂದಿವೆ. ಉಡುಪಿಯಲ್ಲಿ 7, ದಕ್ಷಿಣ ಕನ್ನಡ ಮತ್ತು ದಾವಣಗೆರೆಯಲ್ಲಿ ತಲಾ 3, ಬೆಂಗಳೂರು ಗ್ರಾಮಾಂತರದಲ್ಲಿ 2 ಹಾಗೂ ಶಿವಮೊಗ್ಗ 1 ಪ್ರಕರಣಗಳು ವರದಿಯಾಗಿವೆ.
ಕಳೆದ ಸಾಲಿನಲ್ಲಿ 2 ಸಾವಿರಕ್ಕೂ ಅಧಿಕ ಮಂದಿಗೆ ಸೋಂಕು ತಗುಲಿರುವುದು ವರದಿಯಾಗಿತ್ತು. ಇವರಲ್ಲಿ 96 ಮಂದಿ ಚಿಕಿತ್ಸೆ ಫಲಿಸದೆಯೇ ಮೃತಪಟ್ಟಿದ್ದರು. ಇದರಿಂದಾಗಿ ಐದು ವರ್ಷಗಳಲ್ಲಿಯೇ ಅತೀ ಹೆಚ್ಚು ಸಾವು ವರದಿಯಾಗಿತ್ತು. 2010ರಲ್ಲಿ 120 ಮಂದಿ ಈ ಜ್ವರಕ್ಕೆ ಕೊನೆಯುಸಿರೆಳೆದಿದ್ದರು.
ಆದರೆ, ವರ್ಷಾಂತ್ಯದ ವೇಳೆಗೆ ಸೋಂಕು ನಿಯಂತ್ರಣಕ್ಕೆ ಬಂದಿತ್ತು. ಆದರೆ, ಈಗ ಪುನಃ ಸೋಂಕು ಹರಡಲು ಆರಂಭಿಸಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಜ್ವರ, ಶೀತ, ಗಂಟಲ ನೋವು, ತಲೆನೋವು, ಮೈ–ಕೈ ನೋವು, ವಾಂತಿ ಮತ್ತು ಬೇಧಿಯು ಎಚ್‌1ಎನ್‌1 ಜ್ವರದ ಪ್ರಮುಖ ಲಕ್ಷಣಗಳಾಗಿವೆ.
ಯುಎನ್ಐ ಎಸ್ಎಚ್ 2005