Monday, Sep 16 2019 | Time 12:06 Hrs(IST)
 • ತ್ರಿಪುರಾದಲ್ಲಿ ಅಗ್ಗದ ದರದಲ್ಲಿ ಈರುಳ್ಳಿ ಪೂರೈಕೆ: ಮನೋಜ್ ಕಾಂತಿ ದೇಬ್
 • ಭಾರತದಲ್ಲಿ ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಉತ್ಪಾದನೆ ಬಗ್ಗೆ ರಷ್ಯಾ ಪರಿಶೀಲನೆ-ರೋಸ್ಟೆಕ್ ಸಿಇಒ
 • ಕೆ ಎಸ್‍ ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್‍ಡಿಪಿಐ
 • ಬಲವಂತದ ಭಾಷೆ ಹೇರಿಕೆ ಸಲ್ಲದು: ಸಿದ್ದರಾಮಯ್ಯ
 • ದೇಶದಲ್ಲಿ ಮಳೆಯಿಂದ ಈ ವರ್ಷ 1,422 ಜನರ ಸಾವು: ವರದಿ
 • ಪಂಕಜ್ ಅಡ್ವಾನಿಯ ಸ್ಥಿರ ಪ್ರದರ್ಶನ ಶ್ಲಾಘನೀಯ: ಮೋದಿ
 • ಬೇಗೂರು ಪೊಲೀಸರಿಂದ ರೌಡಿ ಶೀಟರ್ ಓಣಿ ಶ್ರೀಧರ್ ಕಾಲಿಗೆ ಗುಂಡೇಟು
 • ಪಾಕಿಸ್ತಾನದಲ್ಲಿ ಭದ್ರತೆ ಪರಿಶೀಲಿಸಿದ ನಂತರ ಪಂದ್ಯದ ಅಧಿಕಾರಿಗಳ ನೇಮಕ: ಐಸಿಸಿ
 • 47 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್ ಸರಣಿ ಡ್ರಾ
 • ಬಂಜಾ ಲುಕಾ ಚಾಲೆಂಜರ್‌: ರನ್ನರ್ ಅಪ್‌ಗೆ ತೃಪ್ತಿಪಟ್ಟ ಸುಮಿತ್‌ ನಗಾಲ್‌
 • ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ನಾಲ್ವರು ಯೋಧರಿಗೆ ಗಾಯ
Health -Lifestyle Share

ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ

ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ
ವಾಯ್ಲಾದಿಂದ ನೂತನ ಆಭರಣಗಳ ಸರಣಿ ‘ಬನಾರಸ್’ ಅನಾವರಣ

ಬೆಂಗಳೂರು ಜೂ 11 (ಯುಎನ್ಐ) ಬನಾರಸ್ ನ ನದಿ ದಂಡೆಯಲ್ಲಿನ ಜೀವನದಿಂದ ಸ್ಪೂರ್ತಿ ಪಡೆದ ಫ್ಯಾಷನ್ ಆಭರಣಗಳ ಬ್ರಾಂಡ್ ವಾಯ್ಲಾ ತನ್ನ ನೂತನ ಆಕ್ಸಿಡೈಸ್ಡ್ ಆಭರಣಗಳ ಸಂಗ್ರಹ ‘ಬನಾರಸ್’ ಅನ್ನು ಬಿಡುಗಡೆ ಮಾಡಿದೆ.

ಈ ಆಭರಣ ಸಂಗ್ರಹವು ಸಾಂಪ್ರದಾಯಿಕ ಬನಾರಸಿ ಸೀರೆಗಳ ಸಮೃದ್ಧತೆ ಮತ್ತು ಬನಾರಸ್ ಎಂಬ ಪವಿತ್ರ ನಗರದ ಅಯಸ್ಕಾಂತೀಯ ಶಕ್ತಿಗಳಿಂದ ಸ್ಪೂರ್ತಿ ಪಡೆದಿದ್ದು, ಈ ಶ್ರೇಣಿಯಲ್ಲಿ ಕಪ್ಪು, ಕೆಂಪು ಮತ್ತು ಬಿಳಿಯ ಬಣ್ಣದ, ಪುರಾತನ ವಾಸ್ತುಶಿಲ್ಪ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಎನಾಮೆಲ್ಡ್ ಆಭರಣಗಳಾಗಿವೆ.

ಬನಾರಸ್ ಫಿಲಿಗ್ರಿ ಫ್ಲೋರಲ್ ಓಲೆಗಳು : ಬನಾರಸ್ ನಗರದ ಕಲೆ ಮತ್ತು ವಾಸ್ತುಶಿಲ್ಪದಿಂದ ಸ್ಪೂರ್ತಿ ಪಡೆದಿರುವ ಈ ಫ್ಲೋರಲ್ ಬ್ರಾಸ್ ಓಲೆಗಳು ಫಿಲಿಗ್ರಿ ವಿನ್ಯಾಸ ಹೊಂದಿದ್ದು ಬೆಳ್ಳಿಯ ಪ್ಲೇಟಿಂಗ್ ಜೊತೆಗೆ ಮುತ್ತಿನ ಮಣಿಗಳನ್ನು ಒಳಗೊಂಡಿದೆ.

ಬನಾರಸ್ ಫ್ಲೋರಲ್ ಮೋಟಿಫ್ಸ್ ಎನಾಮಲ್ಡ್ ಓಲೆಗಳು: ಖ್ಯಾತ ಬನಾರಸಿ ಸೀರೆಗಳ ಕಲೆ ಮತ್ತು ಆಕಾರಗಳಿಂದ ಸ್ಫೂರ್ತಿ ಪಡೆದು ತಯಾರಾಗಿರುವ ಈ ಎನಾಮಲ್ಡ್ ಫ್ಲೋರಲ್ ಓಲೆಗಳನ್ನು ಹಿತ್ತಾಳೆಯಿಂದ ತಯಾರಿಸಲಾಗಿದ್ದು ಸಿಲ್ವರ್ ಪ್ಲೇಟಿಂಗ್ ಜೊತೆಗೆ ಪುಟ್ಟ ಪುಟ್ಟ ಗೆಜ್ಜೆಗಳನ್ನು ಅಳವಡಿಸಲಾಗಿದೆ.

ಭಾರತೀಯ ಮತ್ತು ಪಾಶ್ಚಿಮಾತ್ಯ ಉಡುಪುಗಳೆರಡಕ್ಕೂ ಹೊಂದಿಕೆಯಾಗುವ ಈ ಆಭರಣಗಳು ಸಮಾರಂಭಗಳಲ್ಲಷ್ಟೇ ಅಲ್ಲದೇ ಕಾರ್ಯಸ್ಥಳಗಳಲ್ಲಿಯೂ ಧರಿಸಲು ಸೂಕ್ತವಾಗಿವೆ. ಮುತ್ತಿನ ಮಣಿಗಳಿಂದ ಪೋಣಿಸಿದ ಹಾಗೂ ಸೂಕ್ಷ್ಮ ಕೆತ್ತನೆಯಿಂದ ಕೂಡಿರುವ ಬನಾರಸ್ ಆಭರಣಗಳು ಹಲವು ವಿಶೇಷತೆಗಳಿಂದ ಕೂಡಿವೆ.

ಯುಎನ್ಐ ವಿಎನ್ 1625

More News
'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

'ಗುಟ್ಟಿನಿಂದ ಬಟ್ಟಲಿನೆಡೆಗೆ' :ಇದು ಸಂತ್ರಸ್ತ ಸಹೋದರಿಯರಿಗಾಗಿ

09 Sep 2019 | 5:54 PM

ಬೆಂಗಳೂರು, ಸೆ 9 (ಯುಎನ್‍ಐ) ಸುತ್ತೆಲ್ಲಾ ನೆರೆ, ಕಾಲು ಚಾಚಲು ಜಾಗವಿರದ ನಿರಾಶ್ರಿತಕೇಂದ್ರದಲ್ಲಿ ಮಹಿಳೆಯರು ಮುಟ್ಟಿನ ಸಂದರ್ಭಗಳಲ್ಲಿ ಎದುರಿಸುವ ಯಾತನೆ ಅನುಭವಿಸಿದವರಿಗಷ್ಟೆ ಗೊತ್ತು ಅಂತಹ ದಿನಗಳಲ್ಲಿ ಎದುರಿಸುವ ಮುಜುಗರದ ಪರಿಸ್ಥಿತಿಯನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗದಂತಹ ಅನುಭವಿಸಲು ಸಾಧ್ಯವಿಲ್ಲದಂತಹ ಸನ್ನಿವೇಶ ಇರುತ್ತದೆ ಆದರೆ ಇಂತಹ ನಿರಾಶ್ರಿತ ಕೇಂದ್ರಗಳಲ್ಲಿ ಮಹಿಳೆಯರ ನೆರವಿಗೆ ಬಂದಿದ್ದು ‘ಗುಟ್ಟಿನಿಂದ ಬಟ್ಟಲಿನೆಡೆಗೆ’ ಅಭಿಯಾನ

 Sharesee more..
ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅತಿ ಅಗತ್ಯ; ಕಿರಣ್ ಬೇಡಿ

ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಅತಿ ಅಗತ್ಯ; ಕಿರಣ್ ಬೇಡಿ

08 Sep 2019 | 8:04 PM

ಬೆಂಗಳೂರು, ಸೆ 8 (ಯುಎನ್ಐ) ಶಾಲಾ ಮಟ್ಟದಲ್ಲೇ ಮಕ್ಕಳಿಗೆ ಲೈಂಗಿಕ ಶಿಕ್ಷಣ ಕಡ್ಡಾಯವಾಗಬೇಕು ಎಂದು ಪುದುಚೆರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅಭಿಪ್ರಾಯಪಟ್ಟರು.

 Sharesee more..