Friday, Feb 28 2020 | Time 09:50 Hrs(IST)
  • ಖ್ಯಾತ ಇತಿಹಾಸಕಾರ ಷ ಷೆಟ್ಟರ್ ನಿಧನ
  • ದೀರ್ಘಾವಧಿ ಬಳಿಕ ರಾಷ್ಟ್ರೀಯ ಫುಟ್ಬಾಲ್ ಶಿಬಿರಕ್ಕೆ ಮರಳಿದ ಸಂದೇಶ್‌, ಜೆಜೆ
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
business economy Share

ವಿಶ್ವ ಆರ್ಥಿಕ ಶೃಂಗಸಭೆ 2020: ಕೈಗಾರಿಕಾ ಬೆಳವಣಿಗೆಗೆ ಎಲ್ಲ ನೆರವು-ಯಡಿಯೂರಪ್ಪ ಭರವಸೆ

ವಿಶ್ವ ಆರ್ಥಿಕ ಶೃಂಗಸಭೆ 2020: ಕೈಗಾರಿಕಾ ಬೆಳವಣಿಗೆಗೆ ಎಲ್ಲ ನೆರವು-ಯಡಿಯೂರಪ್ಪ ಭರವಸೆ
ವಿಶ್ವ ಆರ್ಥಿಕ ಶೃಂಗಸಭೆ 2020: ಕೈಗಾರಿಕಾ ಬೆಳವಣಿಗೆಗೆ ಎಲ್ಲ ನೆರವು-ಯಡಿಯೂರಪ್ಪ ಭರವಸೆ

ದಾವೋಸ್, ಜ24(ಯುಎನ್‍ಐ)- ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಎಲ್ಲ ರೀತಿಯ ನೆರವು ನೀಡುವುದಾಗಿ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯಲ್ಲಿ ರಾಜ್ಯದ ನಿಯೋಗದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಭರವಸೆ ನೀಡಿದ್ದಾರೆ.

ಗುರುವಾರ ಇಲ್ಲಿ ಉದ್ಯಮದ ಮುಖಂಡರು ಮತ್ತು ನೀತಿ ನಿರೂಪಕರೊಂದಿಗೆ ಚರ್ಚಿಸಿದ ನಂತರ ಮುಖ್ಯಮಂತ್ರಿ ಈ ಭರವಸೆ ನೀಡಿದ್ದಾರೆ.

ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯ ಮೂರನೇ ದಿನದಂದು ಕೋಕಾ ಕೋಲಾ ಕಂಪನಿ, ಉಬರ್, ಎಸ್‍ಎಪಿ ಲ್ಯಾಬ್ಸ್, ಜನರಲ್ ಎಲೆಕ್ಟ್ರಿಕ್ (ಜಿಇ), ಸ್ವಿಸ್ ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ಕಂಪೆನಿಗಳ ಪ್ರಮುಖರು ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದರು.

ಉದ್ಯಮದ ಮುಖಂಡರ ಜತೆಗಿನ ಸಂವಾದದ ವೇಳೆ, ಕರ್ನಾಟಕದಲ್ಲಿ ಈ ಕಂಪೆನಿಗಳ ವಿಸ್ತರಣಾ ಯೋಜನೆಗಳ ಬಗ್ಗೆ ಮಾಹಿತಿ ಪಡೆದ ಮುಖ್ಯಮಂತ್ರಿಯವರು, ರಾಜ್ಯದಲ್ಲಿ ಕೈಗಾರಿಕಾ ಬೆಳವಣಿಗೆಗೆ ಪ್ರೋತ್ಸಾಹ ನೀಡುವ ಭರವಸೆ ನೀಡಿದರು. ಹಣಕಾಸು, ಇಂಧನ ಮತ್ತು ಸಾರಿಗೆ ವಲಯದ ಕಂಪೆನಿಗಳ ಪ್ರಮುಖರನ್ನು ಮುಖ್ಯಮಂತ್ರಿಯವರು ಭೇಟಿಯಾದ್ದರಿಂದ ಸುಸ್ಥಿರ ಅಭಿವೃದ್ಧಿ ಪ್ರಮುಖ ವಿಷಯವಾಗಿತ್ತು.

ಉಬರ್ ಸಿಇಒ ದಾರಾ ಖೋಸ್ರೋಶಾಹಿ ಅವರು ಬೆಂಗಳೂರಿನಲ್ಲಿ ತಮ್ಮ ವಿಸ್ತರಣಾ ಯೋಜನೆಗಳ ಬಗ್ಗೆ ವಿವರಿಸಿ,ರಾಜ್ಯದಲ್ಲಿ ಹೆಚ್ಚು ಬಂಡವಾಳ ಹೂಡಿಕೆಯ ಭರವಸೆಯನ್ನು ಮುಖ್ಯಮಂತ್ರಿಯವರಿಗೆ ನೀಡಿದರು. ಸಿಇ ಅವರು ಜನರಲ್ ಎಲೆಕ್ಟ್ರಿಕ್ ನ ವಿಲಿಯಂ 'ಮೊ' ಕೋವನ್ ಅವರನ್ನು ಸಹ ಮುಖ್ಯಮಂತ್ರಿಯವರು ಭೇಟಿಯಾದರು. ಆರೋಗ್ಯ ವಲಯದÀ ಅಭಿವೃದ್ಧಿ, ವಿದ್ಯುತ್ ಪ್ರಸರಣ, ಪವನ ವಿದ್ಯುತ್ ವಲಯ ಅಭಿವೃದ್ಧಿ ಕುರಿತು ವಿಲಿಯಂ ಅವರು ಮುಖ್ಯಮಂತ್ರಿಯವರೊಂದಿಗೆ ಆಲೋಚನೆಗಳನ್ನು ಹಂಚಿಕೊಂಡರು.

ಆರಂಭಿಕವಾಗಿ 25 ದಶಲಕ್ಷ ಡಾಲರ್ ಹೂಡಿಕೆ ಮತ್ತು ರೈತರಿಗೆ ಹೆಚ್ಚಿನ ಪ್ರಯೋಜನಗಳನ್ನು ಸೃಷ್ಟಿಸುವ ಮತ್ತು ಗ್ರಾಮಗಳಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಯೋಜನೆಗಳನ್ನು ಕೊಕಾ ಕೋಲಾ ಪ್ರತಿನಿಧಿಗಳು ಮುಖ್ಯಮಂತ್ರಿಯವರಿಗೆ ತಿಳಿಸಿದರು.

ಹಿಂದಿನ ದಿನ ಮುಖ್ಯಮಂತ್ರಿಯವರು, ಭಾರತ 5 ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಹೊರಹೊಮ್ಮಲು ಕಾರ್ಯತಂತ್ರ ಮುನ್ನೋಟ ಕುರಿತ ಚರ್ಚೆಯಲ್ಲಿ ಭಾಗವಹಿಸಿದ್ದರು. ಸಭೆಯಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ರಜನೀಶ್ ಕುಮಾರ್ ಮತ್ತು ನಾಸ್ಪರ್ಸ್ ಸಿಇಒ ಬಾಬ್ ವ್ಯಾನ್ ಡಿಜ್ಕ್ ಪಾಲ್ಗೊಂಡಿದ್ದರು.

‘5 ಟ್ರಿಲಿಯನ್ ಡಾಲರ್ ಆರ್ಥಿಕತೆಯ ಈ ಗುರಿಯನ್ನು ಸಾಧಿಸಲು ಎಲ್ಲ ರಾಜ್ಯಗಳು ಪ್ರೇರಕ ಶಕ್ತಿಯಾಗಲಿವೆ. ಕರ್ನಾಟಕ, 250 ಶತಕೋಟಿ ಡಾಲರ್ ಜಿಡಿಪಿ ಹೊಂದಿದೆ ಮತ್ತು ಇದು ಶೇ 9 ಕ್ಕಿಂತ ಹೆಚ್ಚುತ್ತಿದೆ. ಭಾರತದಲ್ಲಿ ಹೂಡಿಕೆ ಮಾಡಲು ಮತ್ತು ತಮ್ಮ ಉದ್ಯಮ ಬೆಳೆಸುವುದಕ್ಕೆ ಹೂಡಿಕೆದಾರರನ್ನು ಆಹ್ವಾನಿಸಲು ನಾವು ಇಲ್ಲಿ ಸೇರಿದ್ದೇವೆ.’ ಎಂದು ಯಡಿಯೂರಪ್ಪ ಈ ಸಂದರ್ಭದಲ್ಲಿ ಹೇಳಿದರು.

ನಿಯೋಗದಲ್ಲಿ ಬೃಹತ್ ಕೈಗಾರಿಕಾ ಸಚಿವ ಶ್ರೀ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್, ಐಟಿ, ಬಿಟಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕಾ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತಾ ಹಾಜರಿದ್ದರು.

uni sls 1447

More News
ಹೂಡಿಕೆ ಉತ್ತೇಜಿಸಲು ನಿರ್ಬಂಧಗಳು ಸಡಿಲ- ಟ್ರಂಪ್ ಭರವಸೆ

ಹೂಡಿಕೆ ಉತ್ತೇಜಿಸಲು ನಿರ್ಬಂಧಗಳು ಸಡಿಲ- ಟ್ರಂಪ್ ಭರವಸೆ

25 Feb 2020 | 7:27 PM

ನವದೆಹಲಿ, ಫೆ 25 (ಯುಎನ್‌ಐ) ಮುಂಬರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಜಯಗಳಿಸಿದರೆ ಮಾರುಕಟ್ಟೆ ಸಾವಿರಾರು ಅಂಕ ಜಿಗಿಯುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ಎರಡು ದಿನಗಳ ತಮ್ಮ ಚೊಚ್ಚಲ ಭಾರತ ಭೇಟಿಯಲ್ಲಿ ಭಾರತೀಯ ಉನ್ನತ ಉದ್ಯಮಿಗಳಿಗೆ ಹೇಳಿದ್ದಾರೆ.

 Sharesee more..

ಕೌಶಲ ತರಬೇತಿ ಜೊತೆಗೆ ಇಂಜಿನಿಯರ್ ಗಳಿಗೆ ಕೆಲಸ

25 Feb 2020 | 11:55 AM

 Sharesee more..

ಹೆಚ್ಚಿದ ಚಿನ್ನದ ದರ

23 Feb 2020 | 10:13 PM

 Sharesee more..