Tuesday, Nov 19 2019 | Time 06:11 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
Sports Share

ಶಮಿ ಹ್ಯಾಟ್ರಿಕ್‌ ಸಾಧನೆಯೇ ನನ್ನ ಸ್ಮರಣೆಗೆ ಕಾರಣ: ಚೇತನ್‌ ಶರ್ಮಾ

ಲಂಡನ್, ಜೂ 24 (ಯುಎನ್‌ಐ) ಐಸಿಸಿ ವಿಶ್ವಕಪ್‌ನ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್‌ ಶಮಿ ಹ್ಯಾಟ್ರಿಕ್‌ ವಿಕೆಟ್ ಪಡೆದ ಫಲವಾಗಿ ತಮ್ಮನ್ನು ತಿಳಿದುಕೊಳ್ಳುವಂತಾಯಿತು ಎಂದು ಚೇತನ್ ಶರ್ಮಾ ಹೇಳಿದ್ದಾರೆ.
ಶನಿವಾರ ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನದ ವಿರುದ್ಧ ಭಾರತವು ರೋಚಕ ಗೆಲುವು ಸಾಧಿಸಿತ್ತು. ಈ ಪಂದ್ಯದಲ್ಲಿ ಭಾರತದ ವೇಗಿ ಮೊಹಮ್ಮದ್ ಶಮಿ ಹ್ಯಾಟ್ರಿಕ್ ವಿಕೆಟ್ ಪಡೆದಿದ್ದರು. ಪ್ರಸಕ್ತ ಆವೃತ್ತಿಯಲ್ಲಿ ಮೊದಲ ಹ್ಯಾಟ್ರಿಕ್‌ ಹಾಗೂ ಭಾರತದ ಪಾಲಿಗೆ ವಿಶ್ವಕಪ್‌ನಲ್ಲಿ ಎರಡನೆಯ ಹ್ಯಾಟ್ರಿಕ್ ಸಾಧನೆ ಮಾಡಿದ ಕೀರ್ತಿಗೆ ಶಮಿ ಭಾಜನರಾಗಿದ್ದರು.
ಶಮಿ ಹ್ಯಾಟ್ರಿಕ್‌ ಪಡೆದ ಹಿನ್ನೆಲೆಯಲ್ಲಿ ಹಳೆಯ ದಾಖಲೆಗಳೆಲ್ಲವೂ ನೆನೆಪಿನ ಅಂಗಳಕ್ಕೆ ಬಂದಿತು. ಮೊದಲು ನೆನಪಿಗೆ ಬಂದ ಹೆಸರು ಚೇತನ್ ಶರ್ಮಾ. ವಿಶ್ವಕಪ್‌ನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಮೊದಲ ಹ್ಯಾಟ್ರಿಕ್ ಸಾಧನೆ ಮಾಡಿದ ಭಾರತದ ಮೊದಲ ವೇಗಿ ಚೇತನ್ ಶರ್ಮಾ.
ಈ ಕುರಿತು ಪ್ರತಿಕ್ರಿಯಿಸಿರುವ ಚೇತನ್‌ ಶರ್ಮಾ. "ಮೊಹಮ್ಮದ್ ಶಮಿ ಅವರ ಹ್ಯಾಟ್ರಿಕ್ ಸಾಧನೆಯಿಂದಾಗಿ ಈಗಿನ ಕಾಲಘಟ್ಟದ ಜನರು ಅವರ ಮೂಲಕ ತಮ್ಮನ್ನು ತಿಳಿದುಕೊಳ್ಳುವಂತಾಯಿತು ಎಂದು ಹೇಳಿದ್ದಾರೆ.
ಈಗಿನ ಪೀಳಿಗೆಯ ಜನರಿಗೆ ಮೂರು ದಶಕದ ಹಿಂದೆ ನಾನು ಏನು ಸಾಧಿಸಿದ್ದೆ ಎಂಬುದು ಗೊತ್ತಿರಲಿಲ್ಲ. ಆಗ ನಾಗ್ಪುರದ ವಿಸಿಎ ಕ್ರೀಡಾಂಗಣದಲ್ಲಿ ತಮ್ಮ ಮೊದಲ ಓವರ್‌ನ ನೆನಪನ್ನು ಕೆದಕಲು ಶಮಿ ಅವರ ಸಾಧನೆ ಹೇಗೆ ನೆರವಾಯಿತು. ಇಂದು ನನ್ನನ್ನು ಇಡೀ ದೇಶವೇ ಸ್ಮರಿಸುತ್ತಿರುವುದು ಅತ್ಯಂತ ಹೆಚ್ಚು ಖುಷಿ ತಂದಿದೆ ಎಂದರು.
1987ರಲ್ಲಿ ಹ್ಯಾಟ್ರಿಕ್‌ ಪಡೆದ ಮರುದಿನ ಸೆಮಿಫೈನಲ್‌ಗಾಗಿ ತಂಡದೊಂದಿಗೆ ವಿಮಾನವನ್ನೇರಿದ್ದಾಗ ನಾನು ಒಳಕ್ಕೆ ಪ್ರವೇಶಿಸಿದಾಗ ಎಲ್ಲ ಪ್ರಯಾಣಿಕರೂ ಎದ್ದು ನಿಂತು ಚಪ್ಪಾಳೆಯೊಂದಿಗೆ ಅಭಿನಂದಿಸಿದ್ದರು. ಈ ಸಂದರ್ಭವನ್ನೂ ಎಂದೂ ಮರೆಯಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.
ಯುಎನ್‌ಐ ಆರ್‌ಕೆ ಎಸ್‌ಎಲ್‌ಎಸ್‌ 1418
More News
ಎಟಿಪಿ ಶ್ರೇಯಾಂಕ: ಐದನೇ ಬಾರಿ ಅಗ್ರ ಸ್ಥಾನಕ್ಕೇರಿದ ನಡಾಲ್

ಎಟಿಪಿ ಶ್ರೇಯಾಂಕ: ಐದನೇ ಬಾರಿ ಅಗ್ರ ಸ್ಥಾನಕ್ಕೇರಿದ ನಡಾಲ್

18 Nov 2019 | 8:32 PM

ಪ್ಯಾರಿಸ್, ನ 18 (ಯುಎನ್‌ಐ) ಎಟಿಪಿ ಸೋಮವಾರ ಬಿಡುಗಡೆ ಮಾಡಿದ ವರ್ಷಾಂತ್ಯದ ಪುರುಷರ ಟೆನಿಸ್ ಶ್ರೇಯಾಂಕದಲ್ಲಿ ಸ್ಪೇನ್‌ನ ರಫೆಲ್ ನಡಾಲ್ ಐದನೇ ಬಾರಿ ವಿಶ್ವ ಅಗ್ರ ಸ್ಥಾಾನ ಅಲಂಕರಿಸಿದ್ದಾರೆ.

 Sharesee more..