Tuesday, Jul 23 2019 | Time 00:16 Hrs(IST)
Entertainment Share

ಶುಕ್ರವಾರ ಬರ್ತಿದ್ದಾನೆ ‘ರುಸ್ತುಂ’

ಬೆಂಗಳೂರು, ಜೂನ್ 24 (ಯುಎನ್ಐ) ರವಿವರ್ಮ ನಿರ್ದೇಶನದಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಶ್ರದ್ಧಾ ಶ್ರೀನಾಥ್, ಮಯೂರಿ, ರಚಿತಾ ರಾಮ್ ಅಭಿನಯದ ಬಹುನಿರೀಕ್ಷಿತ "ರುಸ್ತುಂ" ಚಿತ್ರ ಬಿಡುಗಡೆಗೆ ಇನ್ನು 4 ದಿನಗಳು ಬಾಕಿಯಿವೆ.

ನಿರ್ಭೀತ ಮತ್ತು ಪ್ರಾಮಾಣಿಕ ಪೊಲೀಸ್ ಅಧಿಕಾರಿಯು ತನ್ನ ನ್ಯಾಯದ ಅನ್ವೇಷಣೆಯ ಮಾರ್ಗದಲ್ಲಿ ದೋಷಪೂರಿತ ವ್ಯವಸ್ಥೆ ಹಾಗೂ ಅಪರಾಧಿಗಳ ವಿರುದ್ಧ ಹೋರಾಡುವ ಕಥೆಯನ್ನು ‘ರುಸ್ತುಂ’ ಒಳಗೊಂಡಿದೆ.

ರುಸ್ತುಂ ಚಿತ್ರದ ಮೂರು ಹಾಡುಗಳು ಮತ್ತು ಟ್ರೇಲರ್ ವೈರಲ್ ಆಗಿದೆ. ಬಾಲಿವುಡ್ ನಟ ವಿವೇಕ್ ಒಬೆರಾಯ್ ವಿಶೇಷ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಜಯಣ್ಣ-ಭೋಗೇಂದ್ರ ಬಂಡವಾಳ ಹೂಡಿದ್ದಾರೆ.
ರಾಜ್ಯಾದ್ಯಂತ ಶುಕ್ರವಾರ ಬಿಡುಗಡೆಯಾಗಲಿರುವ 'ರುಸ್ತುಂ' ಚಿತ್ರ ವೀಕ್ಷಿಸಲು ಹ್ಯಾಟ್ರಿಕ್ ಹೀರೋ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.
ಯುಎನ್ಐ ಎಸ್ಎ ವಿಎನ್ 1422
More News
ಈ ವಾರ ತೆರೆಗೆ `ದಶರಥ’

ಈ ವಾರ ತೆರೆಗೆ `ದಶರಥ’

22 Jul 2019 | 5:57 PM

ಬೆಂಗಳೂರು, ಜುಲೈ 22 (ಯುಎನ್ಐ) ಎಂ ಎಸ್ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅಕ್ಷಯ್ ಸಮರ್ಥ ನಿರ್ಮಿಸಿರುವ `ದಶರಥ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ

 Sharesee more..

ಜುಲೈ 24ರಂದು `ನನ್ನ ಪ್ರಕಾರ’ ಹಾಡು ಬಿಡುಗಡೆ

22 Jul 2019 | 5:35 PM

 Sharesee more..

ಆಸ್ಟ್ರೇಲಿಯಾಗೆ ‘ಗಂಟುಮೂಟೆ’

22 Jul 2019 | 5:28 PM

 Sharesee more..

ಮುಕೇಶ್ ಜನ್ಮದಿನ: ಪ್ರಸಿದ್ಧ ಗಾಯಕನ ಸ್ಮರಣೆ

22 Jul 2019 | 4:50 PM

ಕೋಲ್ಕತಾ, ಜುಲೈ 22 (ಯುಎನ್ಐ) “ಜೀನಾ ಯಹಾ, ಮರ್ನಾ ಯಹಾ, ಇಸ್ ಕೆ ಸಿವಾ ಜಾನಾ ಕಹಾ” ಹಾಡನ್ನು ಇಂದಿನ ಯುವಪೀಳಿಗೆಯೂ ಹಾಡಿ ನಲಿಯುತ್ತಿದೆ ಇಂತಹ ಹಲವು ಗೀತೆಗಳೊಂದಿಗೆ ತನ್ನ ವಿಶಿಷ್ಟ ಗಾಯನದಿಂದ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವ ಮುಕೇಶ್ ಅವರ 96ನೇ ಜನ್ಮದಿನವನ್ನು ಸೋಮವಾರ ದೇಶಾದ್ಯಂತ ಆಚರಿಸುತ್ತಿದ್ದು, ಸಂಗೀತ ಕಾರ್ಯಕ್ರಮಗಳ ಮೂಲಕ ನಮನ ಸಲ್ಲಿಸಲಾಗುತ್ತಿದೆ

 Sharesee more..

ಈ ವಾರ ‘ಮಹಿರ’ ತೆರೆಗೆ

22 Jul 2019 | 4:17 PM

 Sharesee more..