Monday, Jun 1 2020 | Time 01:51 Hrs(IST)
National Share

ಸಿಕ್ಕೀಂನಲ್ಲಿ ಮೊದಲ ಕೊರೊನವೈರಸ್ ಪ್ರಕರಣ ದೃಢ

ಗ್ಯಾಂಗ್‍ಟಕ್‍, ಮೇ 23 (ಯುಎನ್ಐ) ದಕ್ಷಿಣ ಸಿಕ್ಕಿಂನ ರಬೊಂಗ್ಲಾದಲ್ಲಿ ಕ್ವಾರಂಟೈನ್‍ನಲ್ಲಿದ್ದ ಯುವಕನೊಬ್ಬನಿಗೆ ಕೊರೊನವೈರಸ್ ಸೋಂಕು ದೃಢಪಟ್ಟಿದ್ದು, ರಾಜ್ಯದಲ್ಲಿ ದೃಢಪಟ್ಟ ಮೊದಲ ಪ್ರಕರಣ ಇದಾಗಿದೆ.
ಈ ವ್ಯಕ್ತಿ ಇತ್ತೀಚೆಗಷ್ಟೇ ದೆಹಲಿಯಿಂದ ವಾಪಸ್ಸಾಗಿದ್ದರು.
ಊರಿಗೆ ವಾಪಸ್ಸಾಗುವ ಮಾರ್ಗದಲ್ಲಿ 25 ವರ್ಷದ ಈ ವ್ಯಕ್ತಿ ಚಾಲಕ ಸೇರಿದಂತೆ 11 ಮಂದಿಯೊಂದಿಗೆ ಬಸ್‌ನಲ್ಲಿ ಪ್ರಯಾಣಿಸಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಬಸ್‍ನಲ್ಲಿದ್ದ ಎಲ್ಲಾ ಸಹ ಪ್ರಯಾಣಿಕರನ್ನು ಪರೀಕ್ಷಿಸಲಾಗುವುದು. ಆರೋಗ್ಯ ಕಾರ್ಯದರ್ಶಿ ಡಾ.ಪೆಂಪಾ ಭುಟಿಯಾ ತಿಳಿಸಿದ್ದಾರೆ.
ಗ್ಯಾಂಗ್‍ಟಕ್‍ನಲ್ಲಿ ಮಾದರಿ ಪರೀಕ್ಷೆ ನಂತರ ಕರೋನವೈರಸ್‍ ವ್ಯಕ್ತಿಯಲ್ಲಿ ದೃಢಪಟ್ಟಿತ್ತು. ಪರೀಕ್ಷಾ ಮಾದರಿಯನ್ನು ಉತ್ತರ ಬಂಗಾಳ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಅಲ್ಲಿಯೂ ಸೋಂಕು ಇರುವುದು ದೃಢಪಟ್ಟಿದೆ.
ರಂಗ್ಪೋ ಚೆಕ್ ಪೋಸ್ಟ್‍ ನಲ್ಲಿದ್ದ ಸಿಬ್ಬಂದಿಯನ್ನೂ ತಪಾಸಣೆಗೆ ಒಳಪಡಿಸಲಾಗಿದೆ.
ಯುಎನ್‍ಐ ಎಸ್‍ಎಲ್ಎಸ್ 2015
More News
ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

ಜೂನ್ 3ರ ವೇಳೆಗೆ ಗುಜರಾತ್,ಮಹಾರಾಷ್ಟ್ರ ಕರಾವಳಿಗೆ ಚಂಡಮಾರುತ ಬೀಸುವ ಸಾಧ್ಯತೆ:ಹವಾಮಾನ ಇಲಾಖೆ ಎಚ್ಚರಿಕೆ

31 May 2020 | 9:35 PM

ನವದೆಹಲಿ, ಮೇ 31 (ಯುಎನ್‌ಐ) ಅರಬ್ಬಿ ಸಮುದ್ರ ಮತ್ತು ಲಕ್ಷದ್ವೀಪಗಳ ಮೇಲೆ ರೂಪುಗೊಂಡ ಕಡಿಮೆ ಒತ್ತಡ ಪ್ರದೇಶವು ಚಂಡಮಾರುತವಾಗಿ ಮತ್ತಷ್ಟು ತೀವ್ರಗೊಳ್ಳುವ ಸಾಧ್ಯತೆಯಿದ್ದು, ಜೂನ್ 3 ರೊಳಗೆ ಕರಾವಳಿ ರಾಜ್ಯಗಳಾದ ಮಹಾರಾಷ್ಟ್ರ ಮತ್ತು ಗುಜರಾತ್ ಗೆ ಬೀಸುವ ಸಾಧ್ಯತೆ ಇದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.

 Sharesee more..
ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

ದೇಶದಲ್ಲಿ ಒಂದೇ ದಿನ 8380 ಕೊರೋನಾ ಸೋಂಕು ಪತ್ತೆ: ಸಾವಿನ ಸಂಖ್ಯೆ 5164ಕ್ಕೆ ಏರಿಕೆ

31 May 2020 | 9:26 PM

ನವದೆಹಲಿ, ಮೇ 31 (ಯುಎನ್ಐ) ರಾಷ್ಟ್ರವ್ಯಾಪಿ ಲಾಕ್‌ಡೌನ್ 4.0 ಭಾನುವಾರ ಮುಕ್ತಾಯಗೊಳ್ಳುತ್ತಿದ್ದಂತೆ, ದೇಶದಲ್ಲಿ ಒಂದೇ ದಿನ ಕೊರೋನಾ ಸೋಂಕು 8380 ಜನರಲ್ಲಿ ಕಂಡುಬಂದಿದೆ.

 Sharesee more..