Wednesday, May 27 2020 | Time 03:20 Hrs(IST)
  • ಬೆಂಗಳೂರು ಗಾಳಿ ಮಳೆಗೆ ಓರ್ವ ಯುವತಿ ಬಲಿ : ಧರೆಗುರುಳಿದ ಮರ,ವಿದ್ಯುತ್ ಕಂಬಗಳು
Health -Lifestyle Share

ಸಾಂಕ್ರಾಮಿಕವಲ್ಲದ ಕಾಯಿಲೆ: ಭಾರತದಲ್ಲಿ ಪ್ರತಿ ಸೆಕೆಂಡಿಗೆ 10 ಜನರ ಸಾವು!

ಚೆನ್ನೈ, ಜುಲೈ 10 (ಯುಎನ್ಐ) ಹೃದ್ರೋಗ, ಕ್ಯಾನ್ಸರ್, ಮಧುಮೇಹ, ಉಬ್ಬಸದಂತಹ ಸಾಂಕ್ರಾಮಿಕವಲ್ಲದ ವಿವಿಧ ಬಗೆಯ ಕಾಯಿಲೆಗಳಿಗೆ ಭಾರತದಲ್ಲಿ ಪ್ರತಿ ಸೆಕೆಂಡಿಗೆ 10 ಜನರು ಸಾವನ್ನಪ್ಪುತ್ತಿದ್ದು, ಆರೋಗ್ಯಕರ ಜೀವನಕ್ಕಾಗಿ ಸೂಕ್ತ ಆಹಾರ ಕ್ರಮ ಅನುಸರಿಸುವಂತೆ ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಸಲಹೆ ನೀಡಿದ್ದಾರೆ
ಅಪೊಲೊ ಆಸ್ಪತ್ರೆ ಹಾಗೂ ಸ್ಯಾಮ್ ಸಂಗ್ ಎಲೆಕ್ಟ್ರಾನಿಕ್ಸ್ ಬುಧವಾರ ಜಂಟಿಯಾಗಿ ಆಯೋಜಿಸಿದ್ದ ‘ಸಂಚಾರಿ ಆರೋಗ್ಯ ಘಟಕ’ ಉದ್ಘಾಟಿಸಿ ಮಾತನಾಡಿದ ಅವರು, ಸಾಂಕ್ರಾಮಿಕವಲ್ಲದ ರೋಗಗಳಿಗೆ ಜಾಗತಿಕವಾಗಿ ಗಂಟೆಗೆ 15 ದಶಲಕ್ಷ ಜನರು ಅಕಾಲಿಕವಾಗಿ ಮೃತಪಡುತ್ತಿದ್ದಾರೆ ಮಧ್ಯಮ ಹಾಗೂ ಕಡಿಮೆ ಆದಾಯವುಳ್ಳ ದೇಶಗಳಲ್ಲಿಯೇ ಸಾವಿನ ಪ್ರಮಾಣ ಹೆಚ್ಚಿದ್ದು, ಈ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಕ್ಯಾನ್ಸರ್, ಹೃದ್ರೋಗ ಸಮಸ್ಯೆಗಳು, ಮಧುಮೇಹ, ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಗಳಿಂದ ಭಾರತದಲ್ಲಿ ಪ್ರತಿ ಸೆಕೆಂಡ್ ಗೆ 10 ಜನರು ಸಾವನ್ನಪ್ಪುತ್ತಿದ್ದಾರೆ. ದೇಶದ ಮರಣ ಪ್ರಮಾಣದ ಹೆಚ್ಚಳಕ್ಕೆ ಸಾಂಕ್ರಾಮಿಕವಲ್ಲದ ರೋಗಗಳು ಪ್ರಮುಖ ಕಾರಣವಾಗಿವೆ ಎಂದಿದ್ದಾರೆ.
“ಸಾಂಕ್ರಾಮಿಕವಲ್ಲದ ಕಾಯಿಲೆಗಳಿಂದ ಬಳಲುವ 30 ರಿಂದ 70 ವರ್ಷದೊಳಗಿನ ಶೇ 26ರಷ್ಟು ಮಂದಿ ಸಾವನ್ನಪ್ಪುತ್ತಿದ್ದಾರೆ. ದುಡಿಯುವ ಜನರ ಅಕಾಲಿಕ ಮರಣದಿಂದಾಗಿ ದೇಶದ ಉತ್ಪಾದನೆ, ಆರ್ಥಿಕಾಭಿವೃದ್ಧಿ ಕುಸಿತ ಹಾಗೂ ಬಡತನಕ್ಕೆ ಕಾರಣವಾಗುತ್ತದೆ” ಎಂದು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಕಳವಳ ವ್ಯಕ್ತಪಡಿಸಿದ್ದು, ಆಹಾರ, ವಿಹಾರ ಸೇರಿದಂತೆ ಆರೋಗ್ಯಕರ ಜೀವನಶೈಲಿ ಅನುಸರಿಸುವಂತೆ ಯುವಜನತೆಗೆ ಕಿವಿಮಾತು ಹೇಳಿದ್ದಾರೆ.
ಯುಎನ್ಐ ಎಸ್ಎ ವಿಎನ್ 1423