Tuesday, Jul 23 2019 | Time 00:11 Hrs(IST)
International Share

ಸೌದಿ ಅರೇಬಿಯಾ: ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮೇಲೆ ಡ್ರೋನ್ ದಾಳಿ; ಓರ್ವ ಸಾವು

ರಿಯಾದ್, ಜೂ 24 (ಯುಎನ್ಐ) ಸೌದಿ ಅರೇಬಿಯಾದ ದಕ್ಷಿಣ ಪ್ರಾಂತ್ಯದಲ್ಲಿರುವ ಅಭಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ನಡೆದ ಡ್ರೋನ್ ದಾಳಿಯಲ್ಲಿ ಕನಿಷ್ಠ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ವಿಮಾನ ನಿಲ್ದಾಣದ ಪಾರ್ಕಿಂಗ್ ಪ್ರದೇಶದಲ್ಲಿ ನಡೆಸಲಾದ ಡ್ರೋನ್ ದಾಳಿಯಲ್ಲಿ ಸಿರಿಯಾದ ನಾಗರಿಕರೊಬ್ಬರು ಮೃತಪಟ್ಟಿದ್ದು, ಎಂಟು ಜನ ಗಾಯಗೊಂಡಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.
ಶನಿವಾರ ಸೌದಿಯ ಎರಡು ಯುದ್ಧ ವಿಮಾನಗಳು, ಯೆಮೆನ್ ವಾಯು ಸ್ಥಳದಲ್ಲಿ ಹಾರಾಡುತ್ತಿದ್ದ ಹೌತಿ ಉಗ್ರರ ಎರಡು ಡ್ರೋನ್ ಗಳನ್ನು ಧ್ವಂಸಗೊಳಿಸಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಇರಾನ್ ಬೆಂಬಲಿತ ಹೌತಿ ಉಗ್ರರು ಡ್ರೋನ್ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
ಜೂನ್ 12ರಂದು ಇರಾನಿನ ಯುದ್ಧ ವಿಮಾನಗಳು ಅಭಾ ವಿಮಾನ ನಿಲ್ದಾಣದ ಮೇಲೆ ಮಿಸೈಲ್ ದಾಳಿ ನಡೆಸಲಾಗಿದ್ದು, ಪ್ರಯಾಣಿಕರ ಆಗಮನ ಸಭಾಂಗಣದಲ್ಲಿ ಬಿದ್ದಿತ್ತು. ದಾಳಿಯಲ್ಲಿ ಒಟ್ಟು 26 ಮಂದಿ ಗಾಯಗೊಂಡಿದ್ದರು.
ಯುಎನ್ಐ ಡಿವಿ ವಿಎನ್ 0720