Monday, Sep 16 2019 | Time 12:39 Hrs(IST)
 • ದೂರದರ್ಶನಕ್ಕೆ 60ರ ಸಂಭ್ರಮ: ಅಂಚೆ ಚೀಟಿ ಬಿಡುಗಡೆ ಮಾಡಿದ ಜಾವಡೇಕರ್
 • ಆಂಗ್ಲರ ನಾಡಿನಲ್ಲಿ ನಮ್ಮ ಪ್ರಯತ್ನ ಶ್ಲಾಘನೀಯ: ಟಿಮ್‌ ಪೈನ್‌
 • ಕಾಶ್ಮೀರ ಕುರಿತು ಅಮಿತ್‍ ಷಾ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಪರಿಶೀಲನಾ ಸಭೆ
 • ತ್ರಿಪುರಾದಲ್ಲಿ ಅಗ್ಗದ ದರದಲ್ಲಿ ಈರುಳ್ಳಿ ಪೂರೈಕೆ: ಮನೋಜ್ ಕಾಂತಿ ದೇಬ್
 • ಭಾರತದಲ್ಲಿ ಎಸ್ -400 ವಾಯು ರಕ್ಷಣಾ ವ್ಯವಸ್ಥೆ ಉತ್ಪಾದನೆ ಬಗ್ಗೆ ರಷ್ಯಾ ಪರಿಶೀಲನೆ-ರೋಸ್ಟೆಕ್ ಸಿಇಒ
 • ಕೆ ಎಸ್‍ ಈಶ್ವರಪ್ಪ ವಿರುದ್ಧ ಮಾನನಷ್ಟ ಮೊಕದ್ದಮೆ: ಎಸ್‍ಡಿಪಿಐ
 • ಬಲವಂತದ ಭಾಷೆ ಹೇರಿಕೆ ಸಲ್ಲದು: ಸಿದ್ದರಾಮಯ್ಯ
 • ದೇಶದಲ್ಲಿ ಮಳೆಯಿಂದ ಈ ವರ್ಷ 1,422 ಜನರ ಸಾವು: ವರದಿ
 • ಪಂಕಜ್ ಅಡ್ವಾನಿಯ ಸ್ಥಿರ ಪ್ರದರ್ಶನ ಶ್ಲಾಘನೀಯ: ಮೋದಿ
 • ಬೇಗೂರು ಪೊಲೀಸರಿಂದ ರೌಡಿ ಶೀಟರ್ ಓಣಿ ಶ್ರೀಧರ್ ಕಾಲಿಗೆ ಗುಂಡೇಟು
 • ಪಾಕಿಸ್ತಾನದಲ್ಲಿ ಭದ್ರತೆ ಪರಿಶೀಲಿಸಿದ ನಂತರ ಪಂದ್ಯದ ಅಧಿಕಾರಿಗಳ ನೇಮಕ: ಐಸಿಸಿ
 • 47 ವರ್ಷಗಳ ಬಳಿಕ ಆ್ಯಷಸ್‌ ಟೆಸ್ಟ್ ಸರಣಿ ಡ್ರಾ
 • ಬಂಜಾ ಲುಕಾ ಚಾಲೆಂಜರ್‌: ರನ್ನರ್ ಅಪ್‌ಗೆ ತೃಪ್ತಿಪಟ್ಟ ಸುಮಿತ್‌ ನಗಾಲ್‌
 • ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆ: ಭಾರತೀಯ ನಾಲ್ವರು ಯೋಧರಿಗೆ ಗಾಯ
Entertainment Share

ಸ್ಲಮ್ ಹುಡುಗರ ‘ಕಿರಿಕ್ ಲೈಫ್’

ಬೆಂಗಳೂರು, ಜೂನ್ 12 (ಯುಎನ್ಐ) ಪ್ರತಿಯೊಬ್ಬರ ಬದುಕಿನಲ್ಲೂ ಒಂದಿಲ್ಲೊಂದು ಕಿರಿಕ್ ಸಾಮಾನ್ಯ. ಅಂತೆಯೇ ಸ್ಲಮ್ ಯುವಕರು ಸಾಧನೆಯ ಮಾರ್ಗದಲ್ಲಿ ಮುನ್ನಡೆಯುವಾಗ ಎದುರಾಗುವ ಕಿರಿಕ್ ಗಳನ್ನೇ ಆಧಾರವಾಗಿಟ್ಟುಕೊಂಡು ಹೆಣೆಯಲಾಗಿರುವ ಕಥೆಯಡಿ ‘ಕಿರಿಕ್ ಲೈಫ್’ ನಿರ್ಮಾಣವಾಗಲಿದೆ.

ಇತ್ತೀಚೆಗಷ್ಟೆ ಬನ್ನೇರುಘಟ್ಟದಲ್ಲಿ ಮುಹೂರ್ತ ನೆರವೇರಿಸಿಕೊಂಡಿರುವ ಚಿತ್ರವನ್ನು ಸಂದೇಶ್ ಹಾಸನ್ ನಿರ್ಮಿಸುತ್ತಿದ್ದು, ಗುರುರಾಜ್ ಕುಲಕರ್ಣಿ ನಿರ್ದೇಶನದ ಹೊಣೆ ಹೊತ್ತಿದ್ದಾರೆ. ವಿಜಯ ರಾಘವೇಂದ್ರ ಅಭಿನಯದ ‘ನನ್ನ ನಿನ್ನ ಪ್ರೇಮಕಥೆ’ಯ ಶಿವು ಜಮಖಂಡಿ ಸಂಗೀತ ನಿರ್ದೇಶನವಿದೆ. ಐವರು ಸ್ಲಮ್ ಯುವಕರ ಜೀವನದಲ್ಲಿ ನಡೆಯುವ ಕಿರಿಕ್ ಆಧಾರಿತ ಚಿತ್ರಕ್ಕೆ ಕಂಡು, ಕೇಳಿರುವ ನೈಜ ಘಟನೆಗಳೇ ಆಧಾರವಾಗಿದ್ದು, ಕಿರಿಕ್ ಜೊತೆಗೆ, ಲವ್, ಎಮೋಷನ್ ಹಾಗೂ ಪ್ರೇಕ್ಷಕರನ್ನು ಹಿಡಿದಿಟ್ಟುಕೊಳ್ಳಲು ಬೇಕಾದ ಎಲ್ಲ ಮಸಾಲೆಗಳ ಜೊತೆಗೆ ಸಮಾಜಕ್ಕೆ ಬೇಕಾದ ಸಂದೇಶವಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಇನ್ನು ಸಂಗೀತ ಸಂಯೋಜನೆಯಲ್ಲಿ ಹೊಸ ಪ್ರಯತ್ನಕ್ಕೆ ಮುಂದಾಗಿರುವ ಶಿವು ಜಮಖಂಡಿ, ಗಾಳಿ, ಧೂಳು, ಮಳೆ ಮೊದಲಾದ ನೈಸರ್ಗಿಕ ಶಬ್ಬಗಳನ್ನೇ ಬಳಸಿಕೊಳ್ಳುತ್ತಿದ್ದಾರಂತೆ.

ಶಾರ್ಟ್ ಮೂವಿ ಮಾಡಲು ಮುಂದಾಗಿದ್ದ ಚಿತ್ರತಂಡವನ್ನು ಭೇಟಿಯಾದ ನಿರ್ಮಾಪಕ ಸಂದೇಶ್ ಹಾಸನ್ ಸಿನಿಮಾವನ್ನೇ ನಿರ್ಮಿಸುವಂತೆ ಸಲಹೆ ನೀಡಿ ಬಂಡವಾಳ ಹೂಡಿದ್ದಾರೆ. ತಾರಾಗಣದಲ್ಲಿ ಶರತ್, ಮಹೇಶ್, ಪ್ರಕಾಶ್ ತಳ್ಳಿ, ನಾಯಕಿಯಾಗಿ ಸುವಾರ್ಥಾ ಮೊದಲಾದವರಿದ್ದಾರೆ.. ಎರಡು ಷೆಡ್ಯೂಲ್ ಗಳಲ್ಲಿ ಚಿತ್ರೀಕರಣ ಮುಗಿಯಲಿದೆ ಎಂದು ಚಿತ್ರತಂಡ ತಿಳಿಸಿದೆ.

ಯುಎನ್ಐ ಎಸ್ಎ ಎಸ್ಎಚ್ 1740
More News

ಯೂಟ್ಯೂಬ್ ಚಾನೆಲ್ ಗೆ ದಿಶಾ ಪಟಾನಿ ಚಾಲನೆ

14 Sep 2019 | 6:42 PM

 Sharesee more..
ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

ಮೇಕಪ್ ಇಲ್ಲದ ಸಮಂತಾ ಫೋಟೋಗೆ ಅಭಿಮಾನಿಗಳು ಫಿದಾ

14 Sep 2019 | 5:11 PM

ಬೆಂಗಳೂರು, ಸೆ 14 (ಯುಎನ್ಐ) ಕೆಲವು ತಿಂಗಳುಗಳ ಹಿಂದಷ್ಟೇ ಬಹುಭಾಷಾ ನಟಿ ಕಾಜಲ್ ಅಗರ್ ವಾಲ್ ತಮ್ಮ ಮೇಕಪ್ ಇಲ್ಲದ ಫೋಟೋ ಒಂದನ್ನು ಶೇರ್ ಮಾಡಿ, ಅಭಿಮಾನಿಗಳ ಮನಗೆದ್ದಿದ್ದರು.

 Sharesee more..