Sunday, Aug 18 2019 | Time 04:37 Hrs(IST)
National Share

ಹೈಕೋರ್ಟ್‌ಗಳಿಗೆ ಹೊಸ ಮುಖ್ಯ ನ್ಯಾಯಮೂರ್ತಿಗಳ ನೇಮಕ

ನವದೆಹಲಿ, ಮೇ 13(ಯುಎನ್‌ಐ) ಸುಪ್ರೀಂಕೋರ್ಟ್‌ ಇಂದು ಡಿ.ಎನ್‌ ಪಟೇಲ್‌ ಅವರನ್ನು ದೆಹಲಿ ಹೈಕೋರ್ಟ್‌ನ ಮುಂದಿನ ಮುಖ್ಯನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಿದೆ.
ತೆಲಂಗಾಣ ಹೈಕೋರ್ಟ್‌ಗೆ ಜಸ್ಟೀಸ್‌ ಆರ್‌.ಎಸ್‌ ಚೌಹಾಣ್‌ ಅವರ ಹೆಸರನ್ನು ಅಂತಿಮಗೊಳಿಸಿದೆ. ಮಧ್ಯಪ್ರದೇಶದ ಹೈಕೋರ್ಟ್‌ ಮುಖ್ಯನ್ಯಾಯಮೂರ್ತಿಯಾಗಿ ಜಸ್ಟೀಸ್‌ ಎ.ಎ.ಖುರೇಷಿ ನೇಮಕಗೊಂಡಿದ್ದಾರೆ.
ಹಿಮಾಚಲ ಪ್ರದೇಶದ ಹೊಸ ಸಿಜೆಯಾಗಿ ಜಸ್ಟೀಸ್‌ ವಿ.ರಾಮಸುಬ್ರಮಣ್ಯಂ ಹೆಸರು ಘೋಷಣೆಯಾಗಿದೆ. ಸುಪ್ರೀಂಕೋರ್ಟ್‌ನ ಮುಖ್ಯನ್ಯಾಯಮೂರ್ತಿ ರಂಜನ್‌ ಗೊಗೋಯ್‌ ನೇತೃತ್ವದ ಆಯ್ಕೆ ಸಮಿತಿ, ಈ ಸಂಬಂಧ ಶುಕ್ರವಾರ ನಿರ್ಣಯ ಅಂಗೀಕರಿಸಿತ್ತು.
ಗುಜರಾತ್‌ ಹೈಕೋರ್ಟ್‌ನ ಹಿರಿಯ ನ್ಯಾಯಮೂರ್ತಿ ಜಸ್ಟೀಸ್‌ ಡಿ.ಎನ್‌ ಪಟೇಲ್‌ ಪ್ರಸ್ತುತ ಜಾರ್ಖಂಡ್‌ ಹೈಕೋರ್ಟ್‌ನಲ್ಲಿ ವರ್ಗಾವಣೆ ಅನ್ವಯ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಇವರನ್ನು ದೆಹಲಿ ಹೈಕೋರ್ಟ್‌ನ ಮುಂದಿನ ಮುಖ್ಯ ನ್ಯಾಯಮೂರ್ತಿಗಳಾಗಿ ನೇಮಿಸಲು ಸಮಿತಿ ನಿರ್ಧರಿಸಿದೆ ಎಂದು ಸೋಮವಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಯುಎನ್‌ಐ ಕೆಎಸ್‌ವಿ ವಿಎನ್‌ 2058
More News

ಅರುಣ್ ಜೇಟ್ಲಿ ಆರೋಗ್ಯ ಸ್ಥಿರ, ಆದರೆ ಗಂಭೀರ

17 Aug 2019 | 9:23 AM

 Sharesee more..

ಪ್ರಧಾನಿ ಮೋದಿ ಭೂತಾನ್ ಪ್ರವಾಸ

16 Aug 2019 | 10:56 PM

 Sharesee more..
ರೈಲ್ವೆ ಸಚಿವರನ್ನು ಭೇಟಿಯಾದ ಮುಖ್ಯಮಂತ್ರಿ: ವಿವಿಧ ಯೋಜನೆ ಕುರಿತು ಚರ್ಚೆ

ರೈಲ್ವೆ ಸಚಿವರನ್ನು ಭೇಟಿಯಾದ ಮುಖ್ಯಮಂತ್ರಿ: ವಿವಿಧ ಯೋಜನೆ ಕುರಿತು ಚರ್ಚೆ

16 Aug 2019 | 6:28 PM

ನವದೆಹಲಿ, ಆ, 16 [ಯುಎನ್ಐ] ರಾಜ್ಯದಲ್ಲಿ ನೆನೆಗುದಿಗೆ ಬಿದ್ದಿರುವ ವಿವಿಧ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ಪಡೆಯುವ ಕುರಿತು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶುಕ್ರವಾರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

 Sharesee more..