Monday, Jun 24 2019 | Time 14:45 Hrs(IST)
 • ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್ ಶರಣಾದರೆ ಸೂಕ್ತ ರಕ್ಷಣೆ - ಜಮೀರ್ ಅಹಮದ್ ಖಾನ್
 • ಮಹತ್ವದ ಕುಡಿಯುವ ನೀರು ಅಭಾವ ವಿಷಯ ಕುರಿತು ಪ್ರತ್ಯೇಕ ಚರ್ಚೆ ಅಗತ್ಯ: ವೆಂಕಯ್ಯ ನಾಯ್ಡು
 • ಶಮಿ ಹ್ಯಾಟ್ರಿಕ್‌ ಸಾಧನೆಯೇ ನನ್ನ ಸ್ಮರಣೆಗೆ ಕಾರಣ: ಚೇತನ್‌ ಶರ್ಮಾ
 • 100 ದಶಲಕ್ಷ ಮಂದಿಯಿಂದ ಇಂಡೋ-ಪಾಕ್‌ ಪಂದ್ಯ ವೀಕ್ಷಣೆ
 • ನೀರಿನ ಬಿಕ್ಕಟ್ಟು: ಜೈಲುಭರೋ ಚಳುವಳಿ ಸ್ಟಾಲಿನ್ ಎಚ್ಚರಿಕೆ
 • ಬಿಎಸ್ ಪಿ- ಎಸ್ ಪಿ ಮೈತ್ರಿ ಮುರಿದುಕೊಂಡ ಮಾಯಾವತಿ
 • ನಾಳೆ ಇಂಗ್ಲೆಂಡ್‌-ಆಸ್ಟ್ರೇಲಿಯಾ ವಿರುದ್ಧ ಹೈವೋಲ್ಟೇಜ್ ಕದನ
 • ಭಾರತೀಯ ವೈಮಾನಿಕ ಪ್ರದೇಶವನ್ನು ಪಾಕ್ ಎಂದಿಗೂ ಉಲ್ಲಂಘಿಸಿಲ್ಲ: ಏರ್ ಚೀಫ್‍ ಮಾರ್ಷಲ್‍ ಧನೋವಾ
 • ಬಾಂಗ್ಲಾದೇಶ: ರೈಲು ಹಳಿ ತಪ್ಪಿಏಳು ಸಾವು, 200 ಮಂದಿಗೆ ಗಾಯ
 • ಗ್ರಾಮ ವಾಸ್ತವ್ಯ- ಸರ್ಕಾರದ ಶೂನ್ಯ ಸಾಧನೆ : ಬಿಜೆಪಿಯಿಂದ ಕಿರು ಹೊತ್ತಿಗೆ
 • ಹೊಸ ವಿಮಾನ ಸೇರ್ಪಡೆಯಾಗುವವರೆಗೆ ಎಎನ್ -32 ವಿಮಾನ ಮುಂದುವರಿಕೆ: ವಾಯು ಪಡೆ ಮುಖ್ಯಸ್ಥ ಧನೋವಾ
 • ಪಾಕಿಸ್ತಾನಕ್ಕೆ ಶೊಯೆಬ್‌ ಅಕ್ತರ್‌ ನೀಡಿದ ಸಲಹೆ ಹೀಗಿದೆ
 • ಕರ್ತವ್ಯ ನಿರ್ಲಕ್ಯ, 50 ವರ್ಷಮೀರಿದ ಪೊಲೀಸರಿಗೆ ಕಡ್ಡಾಯ ನಿವೃತ್ತಿ; ಉತ್ತರ ಪ್ರದೇಶ ಸಿಎಂ ಯೋಗಿ ಆದೇಶ
 • ಕರ್ತವ್ಯ ನಿರ್ಲಕ್ಯ, 50 ವರ್ಷಮೀರಿದ ಪೊಲೀಸರಿಗೆ ಕಡ್ಡಾಯ ನಿವೃತ್ತಿ; ಉತ್ತರ ಪ್ರದೇಶ ಸಿಎಂ ಯೋಗಿ ಆದೇಶ
 • ಮನ್ಸೂನ್‍ ಖಾನ್‍ನೊಂದಿಗೆ ಯಾವುದೇ ಸಂಬಂಧವಿಲ್ಲ: ರಹ್ಮಾನ್‍ ಖಾನ್ ಸ್ಪಷ್ಟನೆ
Entertainment Share

ಹೊಸ ಪ್ರತಿಭೆಗಳ ‘ಕಿರಿಕ್ ಲೈಫ್’

ಹೊಸ ಪ್ರತಿಭೆಗಳ ‘ಕಿರಿಕ್ ಲೈಫ್’
ಹೊಸ ಪ್ರತಿಭೆಗಳ ‘ಕಿರಿಕ್ ಲೈಫ್’

ಬೆಂಗಳೂರು, ಜೂನ್ 12 (ಯುಎನ್ಐ) ಸಂದೇಶ್ ಹಾಸನ್ ನಿರ್ಮಾಣದಲ್ಲಿ, ಗುರುರಾಜ್ ಕುಲಕರ್ಣಿ ನಿರ್ದೇಶಿಸುತ್ತಿರುವ ‘ಕಿರಿಕ್ ಲೈಫ್’ ಚಿತ್ರದಲ್ಲಿ ಇಂಜಿನಿಯರಿಂಗ್ ಓದುತ್ತಿರುವ ಶರತ್, ಹೋಟೆಲ್ ಮ್ಯಾನೇಜ್ ಮೆಂಟ್ ಮುಗಿಸಿರುವ ಸುವಾರ್ಥ, ಜಿಮ್ ನಡೆಸುತ್ತಿರುವ ಪ್ರಕಾಶ್ ತಳ್ಳಿ, ಮಹೇಶ್ ಸೇರಿದಂತೆ ಬಹುತೇಕ ಹೊಸ ಪ್ರತಿಭೆಗಳು ನಟಿಸುತ್ತಿದ್ದಾರೆ.ಇಂಜಿನಿಯರಿಂಗ್ ಕಲಿಯುತ್ತಿದ್ದರೂ, ಅಭಿನಯದತ್ತ ಆಕರ್ಷಿತನಾಗಿ ಚಿತ್ರರಂಗಕ್ಕೆ ಬಂದಿದ್ದಾಗಿ ಶರತ್ ಹೇಳಿಕೊಂಡಿದ್ದಾರೆ. “ಪ್ರೇಕ್ಷಕರು ಇತ್ತೀಚೆಗೆ ಹೊಸಬರಿಗೆ, ಉತ್ತಮ ಕಥೆಯ ಚಿತ್ರಗಳಿಗೆ ಬೆಂಬಲ ನೀಡುತ್ತಿದ್ದಾರೆ. ಅಂತೆಯೇ ಕಿರಿಕ್ ಲೈಫ್ ಚಿತ್ರಕ್ಕೂ ಪ್ರೋತ್ಸಾಹಿಸುವ ವಿಶ್ವಾಸವಿದೆ. ಇಂಜಿನಿಯರಿಂಗ್ ನಲ್ಲಿ ಬ್ಯಾಕ್ ಲಾಕ್ ಗಳಿವೆ. ಆದಾಗ್ಯೂ ಓದಿಕೊಳ್ಳುತ್ತಲೇ ಅಭಿನಯ ಮುಂದುವರಿಸುವುದಾಗಿ ತಿಳಿಸಿದ್ದಾರೆ.“ಸ್ಲಮ್ ಹುಡುಗರಿಗೆ ಅವರಿರುವ ಗುಡಿಸಲೇ ಅರಮನೆಯಿದ್ದಂತೆ. ಬೆಂಗಳೂರಿಗೆ ಬರುವ ಮುನ್ನ ಹಳ್ಳಿಯಲ್ಲೇ ಇದ್ದ ಕಾರಣ ಸ್ಲಮ್ ಜನರ ಸಮಸ್ಯೆಯ ಅರಿವಿದೆ” ಎಂದು ಶರತ್ ಹೇಳಿಕೊಂಡಿದ್ದಾರೆ.‘ಕಿರಿಕ್ ಲೈಫ್’ ನಲ್ಲಿ ಕಾಲೇಜು ಕನ್ಯೆಯಾಗಿ ಕಾಣಿಸಿಕೊಳ್ಳಲಿರುವ ಸುವಾರ್ಥಾ, ಹೋಟೆಲ್ ಮ್ಯಾನೇಜ್ ಮೆಂಟ್ ಮುಗಿಸಿದ್ದು, ಅಭಿನಯ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದ್ದಾರೆ.ಯುಎನ್ಐ ಎಸ್ಎ ಎಸ್ಎಚ್ 1754