Sunday, Sep 19 2021 | Time 23:02 Hrs(IST)
Sports Share

ಪ್ರಣೀತ್ ಗೆ ಸೋಲು, ಸಾತ್ವಿಕ್ ಜೋಡಿ ಮುನ್ನಡೆ

ಟೋಕಿಯೊ, ಜು.24 (ಯುಎನ್ಐ)- ಭಾರತದ ಭರವಸೆಯ ಬ್ಯಾಡ್ಮಿಂಟನ್ ಆಟಗಾರ ಬಿ ಸಾಯಿ ಪ್ರಣೀತ್ ಒಲಿಂಪಿಕ್ಸ್ ನ ತಮ್ಮ ಮೊದಲ ಗುಂಪು ಪಂದ್ಯದಲ್ಲಿ ಸೋತರೆ, ಸಾತ್ವಿಕ್ ಸೈರಾಜ್ ರೇಖಿ ರೆಡ್ಡಿ ಮತ್ತು ಚಿರಾಗ್ ಶೆಟ್ಟಿ ತಮ್ಮ ಮೊದಲ ಗುಂಪು ಪಂದ್ಯದಲ್ಲಿ ನಂ .3 ಜೋಡಿಯನ್ನು ಸೋಲಿಸಿದರು.

ಶನಿವಾರ ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಪ್ರಣೀತ್ 17-21, 15-21 ರಿಂದ ಇಸ್ರೇಲ್ ನ ಮಿಶ್ರಾ ಜಿಲ್ಬರ್ಮನ್ ವಿರುದ್ಧ ಸೋಲು ಕಂಡರು.

ಸಾತ್ವಿಕ್ ಸೈರಾಜ್ ಮತ್ತು ಚಿರಾಗ್ 3 ನೇ ಕ್ರಮಾಂಕದ ಚೀನಾದ ತೈಪೆ ಜೋಡಿ ಲೀ ಯಾಂಗ್ ಮತ್ತು ವಾಂಗ್ ಲೀ ಚಿನ್ ಅವರನ್ನು ಸೋಲಿಸಿದರು. 21-16, 16-21, 27-25 ರಿಂದ ಚೀನಾದ ಆಟಗಾರ್ತಿಯನ್ನು ಮಣಿಸಿದ ಭಾರತದ ಜೋಡಿ ಅಬ್ಬರಿಸಿತು. ಒಂದು ಗಂಟೆ ಒಂಬತ್ತು ನಿಮಿಷಗಳಲ್ಲಿ ಸಾತ್ವಿಕ್ ಜೋಡಿ ಗೆಲುವು ದಾಖಲಿಸಿತು.

ಯುಎನ್ಐ ವಿಎನ್ಎಲ್ 1844