Sunday, Sep 19 2021 | Time 22:18 Hrs(IST)
Health -Lifestyle Share

ಕೋವಿಡ್ 19: ದೇಶದಲ್ಲಿ 35,342 ಹೊಸ ಪ್ರಕರಣ, 483 ಸಾವು

ಕೋವಿಡ್ 19: ದೇಶದಲ್ಲಿ 35,342 ಹೊಸ ಪ್ರಕರಣ, 483 ಸಾವು
ಕೋವಿಡ್ 19: ದೇಶದಲ್ಲಿ 35,342 ಹೊಸ ಪ್ರಕರಣ, 483 ಸಾವು

ನವದೆಹಲಿ, ಜುಲೈ 23(ಯುಎನ್ಐ) ಕಳೆದ 24 ಗಂಟೆಗಳಲ್ಲಿ ಭಾರತವು 35,342 ಹೊಸ ಕೋವಿಡ್-19 ಪ್ರಕರಣಗಳನ್ನು ದಾಖಲಿಸಿದ್ದು, ಒಟ್ಟು ಸಂಖ್ಯೆ 3,12,93,062 ಕ್ಕೆ ತಲುಪಿದೆ. 483 ಹೊಸ ಸಾವುನೋವುಗಳೊಂದಿಗೆ ಸಾವಿನ ಸಂಖ್ಯೆ 4,19,470 ಕ್ಕೆ ಏರಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.

ಸಚಿವಾಲಯದ ಪ್ರಕಾರ, ಸಕ್ರಿಯ ಪ್ರಕರಣಗಳು 3,881 ರಷ್ಟು ಇಳಿಕೆಯಾಗಿದ್ದು, 4,05,513 ಕ್ಕೆ ತಲುಪಿದೆ. ಹಾಗೂ ಒಟ್ಟು ಪ್ರಮಾಣ ಶೇಕಡಾ 1.30ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 38,740 ಜನರು ಮಾರಣಾಂತಿಕ ವೈರಸ್‌ನಿಂದ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 3,04,68,079 ಕ್ಕೆ ತಲುಪಿದೆ. ಇದು ಪ್ರಕರಣದ ಶೇಕಡಾ 97.36 ರಷ್ಟಿದೆ. ಸಾವಿನ ಪ್ರಮಾಣ ಶೇಕಡಾ 1.34 ರಷ್ಟಿದೆ.

ಏತನ್ಮಧ್ಯೆ, ಕೊರೋನಾ ವೈರಸ್ ಸೋಂಕು ಪತ್ತೆಗಾಗಿ ಈವರೆಗೆ ಒಟ್ಟು 45,29,39,545 ಮಾದರಿಗಳನ್ನು ಪರೀಕ್ಷಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ತಿಳಿಸಿದೆ. ಈ ಪೈಕಿ ಗುರುವಾರ 16,68,561 ಮಾದರಿಗಳನ್ನು ಪರೀಕ್ಷಿಸಲಾಯಿತು.

ಇಲ್ಲಿಯವರೆಗೆ, 42,34,17,030 ಜನರಿಗೆ ಕೋವಿಡ್-19 ಲಸಿಕೆಗಳನ್ನು ನೀಡಲಾಗಿದ್ದು, ಕಳೆದ 24 ಗಂಟೆಗಳಲ್ಲಿ 54,76,423 ಜನರಿಗೆ ವೈರಸ್ ವಿರುದ್ಧ ಲಸಿಕೆ ನೀಡಲಾಗಿದೆ.

ಯುಎನ್ಐ ಎಸ್ಎ 1104