Friday, Feb 28 2020 | Time 09:18 Hrs(IST)
  • ದಕ್ಷಿಣ ಕೊರಿಯಾದಲ್ಲಿ ಮತ್ತೆ 256 ಕೊರೊನಾ ಸೋಂಕು ಪ್ರಕರಣ ದಾಖಲು
  • ಕೊರೊನಾ ಸೋಂಕು : ಹಜ್ ಯಾತ್ರೆಗೆ ನಿರ್ಬಂಧ
  • ಸಿರಿಯಾದಿಂದ ವೈಮಾನಿಕ ದಾಳಿ; 34 ಟರ್ಕಿ ಸೈನಿಕರು ಬಲಿ
  • ಚೀನಾಗೆ ಭಾರತದಿಂದ ವೈದ್ಯಕೀಯ ನೆರವು
  • ಮಹಾದಾಯಿ ನ್ಯಾಯಾಧಿರಣ ಅಧಿಸೂಚನೆ ಪ್ರಕಟ : ಯಡಿಯೂರಪ್ಪ ಹುಟ್ಟು ಹಬ್ಬಕ್ಕೆ ಕೇಂದ್ರದ ಭರ್ಜರಿ ಕೊಡುಗೆ
Entertainment Share

'ಇಂಡಿಯಾ ವರ್ಸಸ್ ಇಂಗ್ಲೆಂಡ್' . . . . . ವೇದಗಳ ಕಾಲದಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಇತ್ತಲ್ವೇ ಮೇಷ್ಟ್ರೇ?

'ಇಂಡಿಯಾ ವರ್ಸಸ್ ಇಂಗ್ಲೆಂಡ್' . . . . . ವೇದಗಳ ಕಾಲದಲ್ಲೇ ಹೆಣ್ಣುಮಕ್ಕಳ ಶಿಕ್ಷಣ ಇತ್ತಲ್ವೇ         ಮೇಷ್ಟ್ರೇ?
'ಇಂಡಿಯಾ ವರ್ಸಸ್ ಇಂಗ್ಲೆಂಡ್

-ಎಸ್‍ ಆಶಾ ಕಶ್ಯಪ್ಬೆಂಗಳೂರು, ಜ 24 (ಯುಎನ್‍ಐ) ಚಂದನವನದ ಪ್ರೀತಿಯ ಮೇಷ್ಟ್ರು, ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗಿ, ಉತ್ತಮ ಓಪನಿಂಗ್ ಪಡೆದಿದೆನಾಯಕ ನಟನಾಗಿ ವಸಿಷ್ಠ ಸಿಂಹ,ನಾಯಕಿಯಾಗಿ ಮಾನ್ವಿತಾ ಹರೀಶ್‍ ಅಭಿನಯ ಚೆನ್ನಾಗಿದೆ, ಇಂಗ್ಲೆಂಡ್ ದೇಶವನ್ನೂ ವೈಭವಯುತವಾಗಿ ತೋರಿಸಲಾಗಿದೆ ಇನ್ನು ಅನಂತನಾಗ್ ಅವರು ಎಂದಿನಂತೆ ತಮ್ಮ ಪಾತ್ರಕ್ಕೆ ಜೀವ ತುಂಬಿ ನಟಿಸಿದ್ದಾರೆ ತಿರುಚಿದ ಇತಿಹಾಸವನ್ನು ಸರಿಪಡಿಸುವಾಟಕ್ಕೆ ಪ್ರೇಕ್ಷಕ ಮೆಚ್ಚುಗೆ ನೀಡಿದ್ದಾನೆಎಲ್ಲವೂ ಸರಿ, ಆದರೆ ನಾಯಕ, ನಾಯಕ ಇಂಗ್ಲೆಂಡ್ ಹಾಗೂ ಇಂಡಿಯಾದ ಬಗ್ಗೆ ವಾಗ್ವಾದ ನಡೆಸುವಾಗ ಬ್ರಿಟಿಷರಿಂದ ಭಾರತಕ್ಕದ ಪ್ರಯೋಜನಗಳಲ್ಲಿ ‘ಹೆಣ್ಣುಮಕ್ಕಳ ಶಿಕ್ಷಣ’ದ ಬಗ್ಗೆ ಹೇಳುತ್ತಾರೆ ಇದು ನಿಜಕ್ಕೂ ಬೇಸರದ ಸಂಗತಿನಾಗತಿಹಳ್ಳಿ ಚಂದ್ರಶೇಖರ್ ಅವರು ಭಾರತದ ಪುರಾಣ, ಇತಿಹಾಸ, ಪರಂಪರೆಗಳ ಬಗ್ಗೆ ಓದಿಕೊಂಡಿದ್ದರೂ, ಬ್ರಿಟಿಷರು ಬಂದ ಬಳಿಕ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಒತ್ತು ನೀಡಲಾಯಿತು ಎಂದು ನಾಯಕನ ಬಾಯಲ್ಲಿ ಹೇಳಿಸಿರುವುದು ಸರಿಯಲ್ಲಋಗ್ವೇದದಲ್ಲಿಯೇ 22 ಋಷಿಕೆಯರ ಹೆಸರುಗಳಿವೆ ಶೌನಕ ಮಹರ್ಷಿಗಳ ಬೃಹದ್ದೇವತಾ ಗ್ರಂಥ ಈ ಬಗ್ಗೆ ಉಲ್ಲೇಖಿಸುತ್ತಾ, ಲೋಪಾಮುದ್ರಾ, ವಿಶ್ವವಾರಾ, ಸಿಕತಾ, ನೀವಾವರಿ, ಘೋಷಾ, ಅಪಾಲಾ, ಶಾಶ್ವತಿ ಮುಂತಾದವರನ್ನು ಹೆಸರಿಸಿದ್ದಾರೆಇನ್ನು, ಮೈತ್ರೇಯಿ, ಗಾರ್ಗಿ ವಾಚಕ್ನವಿ, ಕಾತ್ಯಾಯನಿ ಮೊದಲಾದವರ ಬಗ್ಗೆಯೂ ನೀವು ಕೇಳಿದ್ದೀರಿ ಎಂದುಕೊಂಡಿದ್ದೇವೆಬ್ರಿಟಿಷರಿಗೂ ಮುನ್ನ ನಡೆದ ಪಾಶ್ಚಿಮಾತ್ಯರ ದಾಳಿಯ ಕಾರಣ ಹೆಣ್ಣುಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸದೆ, ಮದುವೆ ಹೆಸರಿನಲ್ಲಿ ಸುರಕ್ಷಿತಳನ್ನಾಗಿಸಲು ಸಮಾಜ ಮುಂದಾಯಿತು ‘ಬ್ರಿಟಿಷರು ಬಂದ ನಂತರ ಮತ್ತೆ ಹೆಣ್ಣು ಮಕ್ಕಳ ಶಿಕ್ಷಣ ವ್ಯವಸ್ಥೆಗೆ ಮರುಜೀವ ನೀಡುವ ಕಾರ್ಯ ನಡೆಯಿತು’ ಎಂದು ಹೇಳಿಸಿದ್ದರೆ, ಇಂದಿನ ಹಾಗೂ ಮುಂದಿನ ಪೀಳಿಗೆಗೆ ಉತ್ತಮ ಮಾಹಿತಿ ಸಿಗುತ್ತಿತ್ತುವೇದಗಳ ಕಾಲದ ಪರಿಚಯವೇ ಇಲ್ಲದವರು ‘ಇಂಡಿಯಾ ವರ್ಸಸ್ ಇಂಗ್ಲೆಂಡ್’ ಚಿತ್ರ ವೀಕ್ಷಿಸಿದಲ್ಲಿ, ಬ್ರಿಟಿಷರಿಂದಲೇ ಭಾರತದಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವಂತಾಯಿತು ಎಂದು ತಪ್ಪಾಗಿ ಅರ್ಥೈಸಿಕೊಳ್ಳುವ ಅಪಾಯವಿದೆ ಏನಂತೀರಿ ಮೇಷ್ಟ್ರೇ?ಯುಎನ್‍ಐ ಎಸ್‍ಎ ವಿಎನ್ 2015

More News
’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

’99 ಲಕ್ಷಕ್ಕೊಬ್ಬ’ ಪ್ರಥಮ್ ಹೊಸ ಚಿತ್ರದ ಟೈಟಲ್ ಲಾಂಚ್

27 Feb 2020 | 9:00 PM

ಬೆಂಗಳೂರು, ಫೆ 27 (ಯುಎನ್‍ಐ) ಬಿಗ್ ಬಾಸ್ ವಿನ್ನರ್ ಪ್ರಥಮ್ ಅಭಿನಯದ ಹೈ ವೋಲ್ಟೇಜ್ ಕಾಮಿಡಿ ಹಾರರ್ ‘ನಟ ಭಯಂಕರ’ ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದ್ದು ಪರೀಕ್ಷೆಗಳು ಮುಗಿದ ನಂತರ ರಿಲೀಸ್ ಆಗಲಿದೆ

 Sharesee more..
‘ಎಂಆರ್ ಪಿ  ಚಿತ್ರದ ತುಣುಕು-ಹಾಸ್ಯದ ಮಿಣುಕು

‘ಎಂಆರ್ ಪಿ ಚಿತ್ರದ ತುಣುಕು-ಹಾಸ್ಯದ ಮಿಣುಕು

26 Feb 2020 | 10:25 PM

ಬೆಂಗಳೂರು, ಫೆ 26 (ಯುಎನ್‍ಐ) ಹಾಸ್ಯ ಲೇಪನದೊಡನೆ ಸಂದೇಶವನ್ನೂ ಒಳಗೊಂಡಿರುವ ಮನರಂಜನಾತ್ಮಕ ಚಿತ್ರ ‘ಎಂಆರ್‍ಪಿ’ ಯ ಟ್ರೇಲರ್ ಬಿಡುಗಡೆಯಾಗಿದೆ

 Sharesee more..