Tuesday, Nov 19 2019 | Time 05:05 Hrs(IST)
  • 15 ಕ್ಷೇತ್ರಗಳಲ್ಲಿ ನಾಮಪತ್ರ ಸಲ್ಲಿಕೆ ಮುಕ್ತಾಯ: ಗೋಕಾಕ್ ನಿಂದ ಸತೀಶ್ ಜಾರಕಿಹೊಳಿ,ಹಿರೇಕೆರೂರಿ ನಿಂದ ಸೃಷ್ಠಿ ಪಾಟೀಲ್,ಮಹಾಲಕ್ಷ್ಮಿ ಲೇಔಟ್ ನಿಂದ ಹೇಮಲತಾ ನಾಮಪತ್ರ ಸಲ್ಲಿಕೆ
Entertainment Share

'ಕೂಲಿ ನಂಬರ್ 1' ಹಾಡನ್ನು ಮರುಸೃಷ್ಟಿಸಲಿದ್ದಾರೆ ವರುಣ್ -ಸಾರಾ

ಮುಂಬೈ, ಜೂನ್ 24 (ಯುಎನ್ಐ) ಬಾಲಿವುಡ್ ನಟ ವರುಣ್ ಧವನ್ ಹಾಗೂ ಅಭಿನೇತ್ರಿ ಸಾರಾ ಅಲಿ ಖಾನ್ ' ಕೂಲಿ ನಂಬರ್ 1' ಚಿತ್ರದ ಸೂಪರ್ ಹಿಟ್ ಹಾಡನ್ನು ಮರುಸೃಷ್ಟಿಸಲು ಹೊರಟಿದ್ದಾರೆ.
ವರುಣ್ ಧವನ್, ತಮ್ಮ ತಂದೆ ಡೆವಿಡ್ ಧವನ್ ಅವರ ಜೊತೆಗೆ ಮತ್ತೆ ಕೆಲಸ ಮಾಡುತ್ತಿದ್ದಾರೆ. ಅವರು ಇದಕ್ಕೂ ಮುನ್ನ ತಮ್ಮ ತಂದೆಯ ಜೊತೆ 'ಜುಡವಾ 2' ಚಿತ್ರದಲ್ಲಿ ಕೆಲಸ ಮಾಡಿದ್ದರು. ಇದೀಗ ಇಬ್ಬರೂ 'ಕೂಲಿ ನಂಬರ್ 1' ಚಿತ್ರದಲ್ಲಿ ಕೆಲಸ ಮಾಡಲು ಹೊರಟಿದ್ದಾರೆ. ಈ ಚಿತ್ರದಲ್ಲಿ ವರುಣ್ ಜೊತೆ ಸಾರಾ ಅಲಿ ಖಾನ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಶೀಘ್ರದಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ. 'ಕೂಲಿ ನಂಬರ್ 1' ಹಾಡನ್ನು ಮರುಸೃಷ್ಟಿ ಮಾಡಲಾಗುತ್ತಿದೆ ಎಂದು ಹೇಳಲಾಗುತ್ತಿದೆ.
'ಕೂಲಿ ನಂಬರ್ 1' ಚಿತ್ರದ ಐಕಾನಿಕ್ ಹಾಡು "ಮೈ ತೊ ರಸ್ತೆ ಜಾ ರಹಾ ಥಾ' ಅನ್ನು ಮರುಸೃಷ್ಟಿ ಮಾಡಲಾಗುತ್ತಿದೆ. ಸದ್ಯ ಈ ಕುರಿತು ಚಿತ್ರ ನಿರ್ಮಾಪಕರು ವಿಚಾರ ವಿಮರ್ಶೆ ಮಾಡುತ್ತಿದ್ದಾರೆ. ಸಿದ್ಧತೆಗಳು ಇನ್ನು ಆರಂಭಿಕ ಹಂತದಲ್ಲಿದ್ದು, ಶೀಘ್ರದಲ್ಲಿಯೇ ನಿರ್ಧಾರ ಕೈಗೊಳ್ಳಲಾಗುವುದು. ಪ್ರಸಕ್ತ ಸಾಲಿನ ಅಗಸ್ಟ್ ತಿಂಗಳಲ್ಲಿಯೇ ಚಿತ್ರೀಕರಣ ಆರಂಭವಾಗಲಿದೆ.
ಚಿತ್ರದಲ್ಲಿ ಇಬ್ಬರು ಹುಡುಗಿಯರ ಮಧ್ಯೆ ಸಿಲುಕಿರುವ ಕೂಲಿ ಪಾತ್ರವನ್ನು ಮೊದಲಿನ ಹಾಗೆ ಇಡಲಾಗಿದೆ. ಆದರೆ, ತೆರೆಯ ಮೇಲೆ ಕೆಲವೊಂದು ಬದಲಾವಣೆಗಳನ್ನು ಮಾಡಿ ನೋಡುಗರಿಗೆ ಸಂಪೂರ್ಣವಾಗಿ ಹೊಸತನದ ಅನುಭವವಾಗುವಂತೆ ಮಾಡಲಾಗುತ್ತಿದೆ.
ಚಿತ್ರ ನಿರ್ಮಾಪಕರು 2020ರ ಮೇ 1ರಂದು ಚಿತ್ರ ಬಿಡುಗಡೆಗೆ ನಿರ್ಧರಿಸಿದ್ದಾರೆ.
ಯುಎನ್ಐ ಡಿವಿ ವಿಎನ್ 0817
More News
‘ನ್ಯೂರಾನ್’ ಸಸ್ಪೆನ್ಸ್ ಥ್ರಿಲ್ಲರ್

‘ನ್ಯೂರಾನ್’ ಸಸ್ಪೆನ್ಸ್ ಥ್ರಿಲ್ಲರ್

18 Nov 2019 | 8:40 PM

ಬೆಂಗಳೂರು, ನ ೧೮ (ಯುಎನ್‌ಐ) ಫ್ರೆಂಡ್ಸ್ ಪ್ರೊಡಕ್ಷನ್ ಲಾಂಛನದಲ್ಲಿ ವಿನಯ್‌ಕುಮಾರ್.

 Sharesee more..

ಶುಕ್ರವಾರ ‘ರಾಜಲಕ್ಷ್ಮೀ’ ದರ್ಶನ

18 Nov 2019 | 7:18 PM

 Sharesee more..

‘ಮನರೂಪ’ಕ್ಕೆ ಮನಸೋಲುವನೇ ಪ್ರೇಕ್ಷಕ?

18 Nov 2019 | 7:14 PM

 Sharesee more..

ಬೆಳ್ಳಿ ತೆರೆಯಲ್ಲಿ ‘ಕನ್ನಡ್ ಗೊತ್ತಿಲ್ಲ'

18 Nov 2019 | 7:00 PM

 Sharesee more..