Monday, Sep 16 2019 | Time 06:35 Hrs(IST)
Sports Share

100 ದಶಲಕ್ಷ ಮಂದಿಯಿಂದ ಇಂಡೋ-ಪಾಕ್‌ ಪಂದ್ಯ ವೀಕ್ಷಣೆ

ನವದೆಹಲಿ, ಜೂ 24 (ಯುಎನ್‌ಐ) ಜೂನ್‌ 16 ರಂದು ನಡೆದಿದ್ದ ಭಾರತ ಹಾಗೂ ಪಾಕಿಸ್ತಾನ ಸಾಂಪ್ರದಾಯಿಕ ಎದುರಾಳಿಗಳ ಕಾದಾಟವನ್ನು ಹಾಟ್‌ಸ್ಟಾರ್‌ನಲ್ಲಿ 100 ದಶಲಕ್ಷ ಬಳಕೆದಾರರು ವೀಕ್ಷಿಸಿದ್ದರು. ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿ ಹಾಟ್‌ಸ್ಟಾರ್‌ನಲ್ಲಿ ಸಕ್ರೀಯರಾಗಿರುವ ದಾಖಲೆಗೆ ಇಂಡೋ-ಪಾಕ್‌ ಕದನ ಸಾಕ್ಷಿಯಾಗಿತ್ತು.

ಶೇ. 66ರಷ್ಟು ಮಂದಿ ನಗರಗಳಿಗಿಂತ ಟೌನ್‌ಗಳಲ್ಲಿ ಹಾಟ್ಸ್‌ಸ್ಟಾರ್‌ನಲ್ಲಿ ಇಂಡೋ-ಪಾಕ್‌ ಪಂದ್ಯ ವೀಕ್ಷಿಸಿದ್ದರು ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ ಅಂಗಳದಲ್ಲಿ ನಡೆದಿದ್ದ ಪಂದ್ಯದಲ್ಲಿ ಮಳೆಯ ನಡುವೆಯೂ ಸಂಘಟಿತ ಹೋರಾಟ ಪ್ರದರ್ಶಿಸಿದ್ದ ವಿರಾಟ್‌ ಕೊಹ್ಲಿ ನಾಯಕತ್ವದ ಭಾರತ 89 ರನ್‌ಗಳಿಂದ ಪಾಕಿಸ್ತಾನವನ್ನು(ಡಿಎಲ್ಎಸ್‌) ಸೋಲಿಸಿತು.
ಪ್ರಸಕ್ತ ಆವೃತ್ತಿಯಲ್ಲಿ ಐಸಿಸಿ ವಿಶ್ವಕಪ್‌ ಟೂರ್ನಿಯನ್ನು ಇಂಗ್ಲೀಷ್‌, ಹಿಂದಿ, ಬೆಂಗಾಲಿ, ತಮಿಳು, ತೆಲುಗು ಹಾಗೂ ಕನ್ನಡದಲ್ಲಿ ಒಟ್ಟು ಆರು ಭಾಷೆಗಳಲ್ಲಿ ನೇರ ಪ್ರಸಾರ ಮಾಡಲಾಗುತ್ತಿದೆ.
"ಇಷ್ಟು ದೊಡ್ಡ ಪ್ರೇಕ್ಷಕರಿಗೆ ಏಕಕಾಲದಲ್ಲಿ ನಿರಂತರ ಕ್ರಿಕೆಟ್ ವೀಕ್ಷಣೆಯ ಅನುಭವವನ್ನುನೀಡಿರುಚುದು ತುಂಬಾ ಸಂತಸ ಉಂಟಾಗಿದೆ ಎಂದು ಹಾಟ್‌ಸ್ಟಾರ್‌ನ ಮುಖ್ಯ ಉತ್ಪನ್ನ ಅಧಿಕಾರಿ ವರುಣ್‌ ನಾರಂಗ್‌ ಹೇಳಿದರು.
ಒಂದೇ ದಿನದ ವೇದಿಕೆಯಲ್ಲಿ 100 ದಶಲಕ್ಷ ವೀಕ್ಷರನ್ನು ಸಾಧಿಸಿದ ನಂತರ ಹಾಟ್‌ಸ್ಟಾರ್ ಒಟಿಟಿ ಉದ್ಯಮಕ್ಕೆ ತರುವ ನಿರ್ವಿವಾದದ ತಂತ್ರಜ್ಞಾನದ ಪರಾಕ್ರಮ ತೋರಿಸುತ್ತದೆ. ಈ ಗಮನಾರ್ಹ ಸಾಧನೆಯು ಹೊಸ ವೀಕ್ಷಕರ ಮಾನದಂಡವನ್ನು ಹೊಂದಿಸಲು ನಮಗೆ ಸಹಾಯ ಮಾಡಿದೆ ಎಂದು ಹೇಳಿದರು.
ಭಾರತದ ಜೊತೆಗೆ, ಹಾಟ್‌ಸ್ಟಾರ್ ಐಸಿಸಿ ಕ್ರಿಕೆಟ್ ವಿಶ್ವಕಪ್ ಅನ್ನು ಯುಎಸ್ ಮತ್ತು ಕೆನಡಾದ ಗ್ರಾಹಕರಿಗೆ ತರುತ್ತಿದ್ದಾರೆ.
ಯುಎನ್‌ಐ ಆರ್‌ಕೆ ಕೆಎಸ್‌ಆರ್‌ 1355
More News

ಚೀನಾ ಓಪನ್: ಸೌರಭ್ ಚಾಂಪಿಯನ್

15 Sep 2019 | 10:31 PM

 Sharesee more..

ಜಿದ್ದಾಜಿದ್ದಿನ ಪಂದ್ಯ ಗೆದ್ದ ಕವಿಂದರ್

15 Sep 2019 | 10:04 PM

 Sharesee more..

ಪ್ರೊ ಕಬಡ್ಡಿ: ದಬಾಂಗ್ ಗೆ ಭರ್ಜರಿ ಜಯ

15 Sep 2019 | 8:55 PM

 Sharesee more..

ಮಳೆಗೆ ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ-20 ಬಲಿ

15 Sep 2019 | 8:38 PM

 Sharesee more..