Saturday, Sep 21 2019 | Time 21:08 Hrs(IST)
  • ಉಪ ಚುನಾವಣೆ ಘೋಷಣೆ: ಅನರ್ಹರಿಗೆ ಭವಿಷ್ಯದ ಚಿಂತೆ
  • ಪರಿಷತ್ ವಿಪಕ್ಷ ಸ್ಥಾನಕ್ಕೆ ಲಾಬಿ ಶುರುಮಾಡಿಕೊಂಡ ಸಿ ಎಂ ಇಬ್ರಾಹಿಂ
  • 370ನೇ ವಿಧಿ ರದ್ಧತಿ ಸಂಬಂಧ ನಾಳೆ ನಗರದಲ್ಲಿ ಜನಜಾಗೃತಿ ಸಮಾವೇಶ : ಎನ್ ರವಿಕುಮಾರ್
  • ಉಪ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದ ಕಾಂಗ್ರೆಸ್ ಸಂಭವನೀಯ ಅಭ್ಯರ್ಥಿಗಳು ?!
  • ಮೋಟಾರು ವಾಹನ ದಂಡ ಶುಲ್ಕ ಇಳಿಕೆ : ಮುಖ್ಯಮಂತ್ರಿ
  • ಉಪಚುನಾವಣೆಗೆ ಸಜ್ಜಾಗಿದ್ದೇವೆ , 15 ಕ್ಷೇತ್ರಗಳನ್ನು ಗೆಲ್ಲುತ್ತೇವೆ : ದಿನೇಶ್ ಗುಂಡೂರಾವ್
Entertainment Share

6 ಭಾಷೆಗಳಲ್ಲಿ ‘ಬೌ ಬೌ’ ಶ್ವಾನಪ್ರೇಮ ಸಾರುವ ಚಿತ್ರ ಸದ್ಯದಲ್ಲೇ ತೆರೆಗೆ: ಪ್ರಮುಖ ಪಾತ್ರದಲ್ಲಿ ಲ್ಯಾಬ್ರಡಾರ್ ಡಾಗ್!

6 ಭಾಷೆಗಳಲ್ಲಿ ‘ಬೌ ಬೌ’ ಶ್ವಾನಪ್ರೇಮ ಸಾರುವ ಚಿತ್ರ ಸದ್ಯದಲ್ಲೇ ತೆರೆಗೆ: ಪ್ರಮುಖ ಪಾತ್ರದಲ್ಲಿ ಲ್ಯಾಬ್ರಡಾರ್ ಡಾಗ್!
6 ಭಾಷೆಗಳಲ್ಲಿ ‘ಬೌ ಬೌ’ ಶ್ವಾನಪ್ರೇಮ ಸಾರುವ ಚಿತ್ರ ಸದ್ಯದಲ್ಲೇ ತೆರೆಗೆ: ಪ್ರಮುಖ ಪಾತ್ರದಲ್ಲಿ ಲ್ಯಾಬ್ರಡಾರ್ ಡಾಗ್!

ಬೆಂಗಳೂರು,ಜುಲೈ 11 (ಯುಎನ್ಐ) ಬಿಡುಗಡೆಗೆ ಮುನ್ನವೇ 20ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಫಿಲ್ಮ್ ಫೆಸ್ಟಿವಲ್ ಪ್ರಶಸ್ತಿ ಬಾಚಿಕೊಂಡಿರುವ ‘ಬೌ ಬೌ’ ಚಿತ್ರ 6 ಭಾಷೆಗಳಲ್ಲಿ ತೆರೆಗೆ ಬರಲು ಸಿದ್ಧವಾಗಿದೆ ಶ್ವಾನ ಹಾಗೂ ಮನುಷ್ಯನ ನಡುವಿನ ಬಾಂಧವ್ಯ, ಶ್ವಾನಗಳಿಗೂ ಭಾವನೆಯಿದೆ ಎಂದು ಸಾರುವ ಚಿತ್ರವನ್ನು ಲಂಡನ್ ಟಾಕೀಸ್ ಅಡಿಯಲ್ಲಿ ನಟರಾಜನ್ ನಿರ್ಮಿಸಿದ್ದಾರೆ ಕಳೆದ 20 ವರ್ಷಗಳಿಂದ ಪ್ರಮುಖ ನಿರ್ದೇಶಕರೊಂದಿಗೆ ಪಳಗಿರುವ ಎಸ್ ಪ್ರದೀಪ್ ಕಿಳ್ಳಿಕರ್ ತಮ್ಮ ಮೊದಲ ನಿರ್ದೇಶನದಲ್ಲಿಯೇ ಯಶಸ್ಸುಗಳಿಸುವಲ್ಲಿ ಸಫಲರಾಗಿದ್ದಾರೆಹೆತ್ತವರಿಲ್ಲದೆ ಅಜ್ಜಿ, ತಾತ ಹಾಗೂ ಬಂಧುಗಳ ಆಶ್ರಯದಲ್ಲಿರುವ ಪುಟ್ಟ ಬಾಲಕ, ಶ್ವಾನದ ಜೊತೆಗೆ ಸ್ನೇಹ ಬೆಳೆಸುತ್ತಾನೆ ಅವರಿಬ್ಬರ ಬಾಂಧವ್ಯಕ್ಕೆ ಧಕ್ಕೆ ಬರುವುದು ಹೇಗೆ, ಈ ಸಂದರ್ಭದಲ್ಲಿ ಶ್ವಾನ ವ್ಯಕ್ತಪಡಿಸುವ ಭಾವನೆಗಳ ಮೇಲೆ ಬೆಳಕು ಚೆಲ್ಲಲಾಗಿದೆ “ಮಾಸ್ಟರ್ ಅಹಾನ್ ಜೊತೆಗೆ ಬೀದಿ ನಾಯಿ ಸುಲ್ತಾನ್ ಬೀಗಲ್ ಡಾಗ್ ಲಕ್ಕಿ ಹಾಗೂ ಪ್ರಮುಖ ಪಾತ್ರದಲ್ಲಿ ಲ್ಯಾಬ್ರಡಾರ್ ಡಾಗ್ ರೋವರ್ ನಟಿಸಿವೆ ಅಹಾನ್ ಹಾಗೂ ಶ್ವಾನಗಳ ಸಹಜಾಭಿನಯವಿದ್ದು, ಕನ್ನಡ, ಹಿಂದಿ, ತೆಲುಗು, ತಮಿಳು, ಮಲಯಾಳಂ, ಬೆಂಗಾಲಿ ಭಾಷೆಗಳಲ್ಲಿ ಚಿತ್ರ ತೆರೆ ಕಾಣಲಿದೆ” ಎಂದು ನಿರ್ದೇಶಕ ಪ್ರದೀಪ್ ಕಿಳ್ಳಿಕರ್ ತಿಳಿಸಿದ್ದಾರೆಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ನೂತನ ಅಧ್ಯಕ್ಷ ಗುಬ್ಬಿ ಜೈರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎನ್ ಎಮ್ ಸುರೇಶ್ ಚಿತ್ರದ ಟೀಸರ್ ಹಾಗೂ ಮೂರು ಹಾಡುಗಳನ್ನು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.ಕಳೆದ 50 ವರ್ಷಗಳಿಂದ ಚಿತ್ರರಂಗದಲ್ಲಿರುವ ಲಂಡನ್ ಟಾಕೀಸ್ ನ ನಟರಾಜನ್ “ಡಾ ರಾಜ್ ಕುಮಾರ್ ಅಭಿನಯದ ಎಮ್ಮೆ ತಮ್ಮಣ್ಣ, ಗಂಧದ ಗುಡಿ ಮೊದಲಾದ ಚಿತ್ರಗಳನ್ನು ತಮಿಳಿಗೆ ಡಬ್ ಮಾಡಿದ್ದ ನಮಗೆ ಕನ್ನಡದಲ್ಲಿ ಚಿತ್ರ ನಿರ್ಮಿಸುವ ಬಯಕೆ ಪೂರ್ಣಗೊಂಡಿದೆ ಪ್ರೇಕ್ಷಕರು ಹರಸಿದರೆ ಕನ್ನಡದಲ್ಲಿ ಮತ್ತಷ್ಟು ಚಿತ್ರಗಳನ್ನು ನಿರ್ಮಿಸಲಾಗುವುದು” ಎಂದು ತಿಳಿಸಿದ್ದಾರೆ.“ನಾಯಿಗಳೆಂದರೆ ಭಯಪಡುತ್ತಿದ್ದ ನಾನು, ಚಿತ್ರೀಕರಣದ ಸಂದರ್ಭದಲ್ಲಿ ಮೂರು ನಾಯಿಗಳ ಜೊತೆ ಅಭಿನಯಿಸಬೇಕಿತ್ತು. ಮೊದಮೊದಲು ಹೆದರಿಕೆಯಾಗುತ್ತಿತ್ತು, ಕ್ರಮೇಣ ಅವುಗಳ ಸ್ನೇಹ ಇಷ್ಟವಾಯಿತು. 2 ವರ್ಷಗಳ ಹಿಂದೆ ನಡೆದ ಚಿತ್ರೀಕರಣಗೊಂಡ ಸಿನೆಮಾ ಇನ್ನು ಕೆಲವೇ ದಿನಗಳಲ್ಲಿ ತೆರೆಗೆ ಬರಲಿದೆ, ವೀಕ್ಷಿಸಿ, ಹರಸಿ” ಎಂದು ಬಾಲನಟ ಅಹಾನ್ ಮನವಿ ಮಾಡಿದ್ದಾನೆ.‘ಬೌ ಬೌ’ ಚಿತ್ರದ ತಾರಾಬಳಗದಲ್ಲಿ ಮಾ. ಅಹಾನ್, ಸುಲ್ತಾನ್(ಬೀದಿನಾಯಿ) ಬೀಗಲ್ ಡಾಗ್ ಲಕ್ಕಿ ಲ್ಯಾಬ್ರಡಾರ್ ಡಾಗ್ ರೋವರ್. ಶಿವ, ತೇಜಸ್ವಿ, ಆರೋಗ್ಯರಾಜ್, ಸತ್ಯಂ, ಶರ್ಮಿಳಾ, ನಂಜಿಲ್ ವಿ. ರಾಮ್ ಬಾಬು ಮೊದಲಾದವರಿದ್ದಾರೆ.

ಯುಎನ್ಐ ಎಸ್ಎ ಎಸ್ಎಚ್ 1650

More News

ಶುಭ ಪೂಂಜ ‘ಖಾಲಿದೋಸೆ ಕಲ್ಪನ

20 Sep 2019 | 6:54 PM

 Sharesee more..

'ಗಂಗೂಬಾಯಿ' ಆಗಿ ಆಲಿಯಾ

20 Sep 2019 | 5:59 PM

 Sharesee more..
ಹಾಲಿವುಡ್ ಗೆ ಹಾರುತ್ತಿದ್ದಾರೆ ಇಂದ್ರಜಿತ್ ಲಂಕೇಶ್: ಆಸ್ಕರ್ ನಾಮನಿರ್ದೇಶಿತ ನಟಿಯ ಚಿತ್ರಕ್ಕೆ ನಿರ್ದೇಶನ!

ಹಾಲಿವುಡ್ ಗೆ ಹಾರುತ್ತಿದ್ದಾರೆ ಇಂದ್ರಜಿತ್ ಲಂಕೇಶ್: ಆಸ್ಕರ್ ನಾಮನಿರ್ದೇಶಿತ ನಟಿಯ ಚಿತ್ರಕ್ಕೆ ನಿರ್ದೇಶನ!

20 Sep 2019 | 4:42 PM

ಬೆಂಗಳೂರು, ಸೆ 20 (ಯುಎನ್ಐ) ಖ್ಯಾತ ಪತ್ರಕರ್ತ, ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಹೊಸ ಚಿತ್ರ ಘೋಷಣೆಯಾಗಿದೆ ಹಾಗೆಂದ ಮಾತ್ರಕ್ಕೆ ಅದು ಸ್ಯಾಂಡಲ್ ವುಡ್ ಅಥವಾ ಬಾಲಿವುಡ್ ಚಿತ್ರ ಎಂದುಕೊಳ್ಳಬೇಡಿ ಈ ಬಾರಿ ಅವರು ನಿರ್ದೇಶಿಸಲು ಹೊರಟಿರುವುದು ಹಾಲಿವುಡ್ ಚಿತ್ರವನ್ನು.

 Sharesee more..